ಮಂಗಳೂರು: ಕಾರು ಢಿಕ್ಕಿ ಹೊಡೆದ ಪರಿಣಾಮ ಹೊಂಡಕ್ಕೆ ಬಿದ್ದ ರಿಕ್ಷಾ: ರಿಕ್ಷಾ ಚಾಲಕ ಮೃತ್ಯು
ಮಂಗಳೂರು: ಮಂಗಳೂರಿನ ನೀರುಮಾರ್ಗ ಸಮೀಪದ ಮಾಣೂರು ಬಳಿ ರಿಕ್ಷಾಕ್ಕೆ ಕಾರು ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಹೊಂಡಕ್ಕೆ ಬಿದ್ದು ಚಾಲಕ ಕಿಶೋರ್ ಕುಮಾರ್ (48) ಮೃತಪಟ್ಟಿದ್ದಾರೆ.
ಕಿಶೋರ್ ಅವರು ಅಡ್ಯಾರ್‌ಕಟ್ಟೆಯಿಂದ ನೀರುಮಾರ್ಗದತ್ತ ತೆರಳುತ್ತಿದ್ದರು. ಮಾಣೂರು ದೇವಸ್ಥಾನದ ಇಳಿಜಾರು ಪ್ರದೇಶದಲ್ಲಿ ರಸ್ತೆಯಲ್ಲಿ ಸಾಗುದ್ದಾಗ ವಿರುದ್ಧ ದಿಕ್ಕಿನಿಂದ ಅರ್ಫಾಝ್ ಅಹಮ್ಮದ್ ಅಫ್ರಿದ್ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಬಂದ ಕಾರು ಢಿಕ್ಕಿ ಹೊಡೆಯಿತು. ಪಕ್ಕದಲ್ಲಿರುವ ಹೊಂಡಕ್ಕೆ ರಿಕ್ಷಾ ಎಸೆಯಲ್ಪಟ್ಟದ್ದಲೆ ಅದರ ಮೇಲೆ ಕಾರು ಬಿದ್ದಿತು.
ರಿಕ್ಷಾ ಚಾಲಕ ಕಿಶೋರ್ ತಲೆಗೆ ಗಂಭೀರ ಗಾಯವಾಯಿತು. ಸ್ಥಳೀಯರು ವೆನಾÉಕ್ ಆಸ್ಪತ್ರೆಗೆ ಕರೆದೊಯ್ದರು. ಪರೀಕ್ಷಿಸಿದ ವೈದ್ಯರು ಕಿಶೋರ್ ಮೃತಪಟ್ಟಿರುವ ಬಗ್ಗೆ ದೃಢಪಡಿಸಿದರು. ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




