ಗರ್ಭಿಣಿ ಪತ್ನಿಯನ್ನು ಕೊಂದು ತುಂಡು ತುಂಡು ಮಾಡಿ ನದಿಗೆ ಬಿಸಾಕಿದ ಪತಿಯ ಬಂಧನ
ಹೈದರಾಬಾದ್: ಭೀಕರ ಘಟನೆಯೊಂದರಲ್ಲಿ ಪತಿ ತನ್ನ ಗರ್ಭಿಣಿ ಪತ್ನಿಯನ್ನು ಕೊಲೆ ಮಾಡಿದ ಬಳಿಕ ಆಕೆಯ ದೇಹವನ್ನು ಪೀಸ್ ಪೀಸ್ ಮಾಡಿ ನದಿಗೆ ಎಸೆದ ಘಟನೆ ನಡೆದಿದ್ದು, ಇದೀಗ ಆರೋಪಿದ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಕೊಲೆ ಮಾಡಿದ ಆರೋಪಿಯನ್ನು ಮಹೇಂದರ್ ರೆಡ್ಡಿ ಎಂದು ಗುರುತಿಸಲಾಗಿದ್ದು, ಪತ್ನಿ ಸ್ವಾತಿಯನ್ನು ಭೀಕರವಾಗಿ ಕೊಲೆ ಮಾಡಿದ್ದ. ತೆಲಂಗಾಣ ರಾಜಧಾನಿ ಹೈದರಾಬಾದ್‌ನ ಮೆಡಿಪಲ್ಲಿಯ ಉಪನಗರವಾದ ಬಾಲಾಜಿಗುಟ್ಟದಲ್ಲಿ ಈ ಭೀಕರ ಘಟನೆ ನಡೆದಿದೆ. ಪೊಲೀಸ್ ಮೂಲಗಳ ಪ್ರಕಾರ ವಿಕಾರಾಬಾದ್ ಜಿಲ್ಲೆಯ ಕಾಮರೆಡ್ಡಿಗೂಡಂನ ಸ್ವಾತಿ ಮತ್ತು ಮಹೇಂದರ್ ಪ್ರೀತಿಸಿ ಮದುವೆಯಾಗಿ ಬಾಲಾಜಿ ಗುಟ್ಟ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಮದುವೆಯಾದ ಬಳಿಕ ಮಹೇಂದರ್ ಪತ್ನಿಯ ಶೀಲದ ಮೇಲೆ ಶಂಕೆ ವ್ಯಕ್ತಪಡಿಸಿದ್ದ. ಈ ನಡುವೆ ಆಕೆ ಗರ್ಭಿಣಿಯಾದ ಬಳಿಕ ಆತನಿಗೆ ಸಂಶಯ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ.
ಈ ಹಿನ್ನಲೆ ಹೆಂಡತಿ ಸ್ವಾತಿಯನ್ನು ಮನೆಯಲ್ಲಿ ಕೊಂದು, ದೇಹ ತುಂಡುತುಂಡಾಗಿ ಕತ್ತರಿಸಿ ಲೆ, ಕೈ ಮತ್ತು ಕಾಲುಗಳನ್ನು ಮೂಸಿ ನದಿಯಲ್ಲಿ ಎಸೆದಿದ್ದಾನೆ. ಆದರೆ ಹೆಂಡತಿಯ ತಲೆಯನ್ನು ಮಾತ್ರ ಮನೆಯಲ್ಲಿಟ್ಟುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.




