ಫ್ರೆಂಡ್ಸ್ ಕಾಪುಮಜಲು(ರಿ.) ಇದರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 21ನೇ ವರ್ಷದ ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮ
ವಿಟ್ಲ: ಫ್ರೆಂಡ್ಸ್ ಕಾಪುಮಜಲು(ರಿ.) ಸಂಘಟನೆ ಇದರ ವತಿಯಿಂದ ಶ್ರೀ ಕೃಷ್ಣ ಜನ್ಮಾಸ್ಟಮಿಯ ಪ್ರಯುಕ್ತ 21ನೇ ವರ್ಷದ ಮೊಸರು ಕುಡಿಕೆ ಉತ್ಸವವು ಆಗಸ್ಟ್ 24 ನೇ ಭಾನುವಾರದಂದು ಕಾಪುಮಜಲು ಶ್ರೀ ಮಲರಾಯಿ ಮೂವರ್ ದೈವಂಗಳ ದೈವಸ್ಥಾನದ ವಠಾರದಲ್ಲಿ ನಡೆಯಿತು.
ಬೆಳಿಗ್ಗೆ 9.30 ಕ್ಕೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅರ್ಚಕರಾದ ಶ್ರೀ ಉದಯ ನಾರಾಯಣ ಭಟ್ ಹಾಗೂ ಶ್ರೀ ನಾಗೇಶ್ ಗೌಡ ಕಾಪುಮಜಲು ಇವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಉದ್ಘಾಟನೆಯ ಬಳಿಕ ಮಕ್ಕಳಿಗೆ, ಪುರುಷರಿಗೆ, ಮಹಿಳೆಯರಿಗೆ ವೈಯಕ್ತಿಕ ಆಟಗಳು ನಡೆಯಿತು. ಮಧ್ಯಾಹ್ನ ಶುಚಿ ರುಚಿಯಾದ ಊಟದ ವ್ಯವಸ್ಥೆಯನ್ನು ಮಾಡಲಾಯಿತು. ಆ ಬಳಿಕ ಲಕ್ಕಿ ಗೇಮ್ಸ್, ಹಗ್ಗ ಜಗ್ಗಾಟದಂತಹ ಗುಂಪು ಆಟಗಳು ನಡೆಯಿತು. ಸಂಜೆ 4 ಗಂಟೆಗೆ ಲಘು ಉಪಹಾರದ ವ್ಯವಸ್ಥೆ ನಡೆಯಿತು.
ಸಂಜೆ 6 ಗಂಟೆಗೆ ಸರಿಯಾಗಿ ಸಮಾರೋಪ ಸಮಾರಂಭ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ವೇದಿಕೆಯಲ್ಲಿ ಸಭಾಧ್ಯಕ್ಷರಾಗಿ ಶ್ರೀ ರಾಜಾರಾಮ್ ಭಟ್ ಬಳಿಪಗುಳಿ, ಅತಿಥಿಗಳಾಗಿ ಶ್ರೀ ರವೀಶ್ ಶೆಟ್ಟಿ ಕಾರ್ಕಳ, ಶ್ರೀ ಸಂದೇಶ್ ಶೆಟ್ಟಿ ಬಿಕ್ನಾಜೆ, ಶ್ರೀ ಅರವಿಂದ ರೈ ಮೂರ್ಜೇಬೆಟ್ಟು, ಶ್ರೀ ನಾಗೇಶ್ ಶೆಟ್ಟಿ ಕೊಡಂಗಾಯಿ, ಶ್ರೀಮತಿ ಪ್ರೇಮಲತಾ, ಶ್ರೀ ಪ್ರವೀಣ್ ರಾಜ್ ಗಾಣದಮನೆ, ಶ್ರೀ ರೋಹಿತ್ ರೈ ಚೆಂಬರಡ್ಕ, ಶ್ರೀ ಗೋಪಾಲ ಜೋಗಿ, ಶ್ರೀ ಬಾಲಕೃಷ್ಣ ಮಡಿವಾಳ, ಶ್ರೀ ವಸಂತ ಪೂಜಾರಿ, ಶ್ರೀ ಆನಂದ ಮಡಿವಾಳ ಉಪಸ್ಥಿತರಿದ್ದರು.
ಸಮರೋಪ ಸಮಾರಂಭದಲ್ಲಿ ಗಣ್ಯಾಥಿತಿಗಳ ಸಮ್ಮುಖದಲ್ಲಿ ನಮ್ಮೂರಿನ ಹೆಮ್ಮೆಯ ಪ್ರತಿಭಾನಿತ್ವ ವಿದ್ಯಾರ್ಥಿನಿ “ಕುಮಾರಿ ಸುಚಿತಾ“ ಇವರನ್ನು ಗೌರವಪೂರ್ವಕವಾಗಿ ಸನ್ಮಾನಿಲಾಯಿತು. ಕೊನೆಯದಾಗಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಗಣೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಸುಕೇಶ್ ಕಾಪುಮಜಲು ಸ್ವಾಗತಿಸಿದರು. ನಿಶಾ ಕಾಪುಮಜಲು ಬಹುಮಾನ ವಿತರಣೆ ಗೆ ಸಹಕರಿಸಿದರು.
ಈ ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಕಾಪುಮಜಲು(ರಿ.) ಸಂಘಟನೆಯ ಸರ್ವಸದಸ್ಯರು, ಊರಿನ ನಾಗರಿಕ ಬಂಧುಗಳು ಉಪಸ್ಥಿತರಿದ್ದರು.




