ಬೆಳ್ತಂಗಡಿ: ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಮತ್ತೆ ಮೆಡಿಕಲ್ ಟೆಸ್ಟ್
ಬೆಳ್ತಂಗಡಿ : ಮಾಸ್ಕ್ ಮ್ಯಾನ್ ಆರೋಪಿ ಚಿನ್ನಯ್ಯಗೆ ಮತ್ತೆ ಮೂರನೇ ಬಾರಿಗೆ ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಿಸಲಾಗಿದೆ.
ಎಸ್.ಐ.ಟಿ ಇನ್ಸೆಕ್ಟರ್ ಸಂಪತ್ ನೇತೃತ್ವದಲ್ಲಿ ಸಬ್ ಇನ್ಸೆಕ್ಟರ್ ವಿನೋದ್ ರೆಡ್ಡಿ ತಂಡ ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಆರೋಪಿ ಚಿನ್ನಯ್ಯ ನಿಗೆ ಆ.25 ರಂದು 11:30 ಕ್ಕೆ ಮೆಡಿಕಲ್ ಟೆಸ್ಟ್ ಮಾಡಿಸಿ ವಾಪಸ್ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ.




