ಆ.27ರಂದು ದಾರುನ್ನಜಾತ್ 15ನೇ ವಾರ್ಷಿಕ ಹಾಗೂ ಮರ್ಹೂಂ ಶೈಖುನಾ ಅಬೂಬಕ್ಕರ್ ಉಸ್ತಾದ್ ಅವರ 6ನೇ ಆಂಡ್ ನೇರ್ಚೆ
ವಿಟ್ಲ: ದಾರುನ್ನಜಾತ್ ಎಜುಕೇಶನಲ್ ಸೆಂಟರ್ ಟಿಪ್ಪು ನಗರ ಕೊಡಂಗಾಯಿ ಈ ಸಂಸ್ಥೆಯ 15ನೇ ವಾರ್ಷಿಕ ಹಾಗೂ ಸಂಸ್ಥೆಯ ಶಿಲ್ಪಿ ಮರ್ಹೂಂ ಶೈಖುನಾ ಅಬೂಬಕ್ಕರ್ ಉಸ್ತಾದ್ 6ನೇ ಆಂಡ್ ನೇರ್ಚೆ ಇದೇ ತಾರೀಕು27 ಬುಧವಾರ ಬೆಳಿಗ್ಗೆ ನಡೆಯಲಿದೆ.
ಧ್ವಜಾರೋಹಣ ಮಕ್ಬರ ಝಿಯಾರತ್ ಸ್ನೇಹ ಸಂಗಮ ಖತ್ಮಕಲ್ ಖುರ್ಆನ್ ಅನುಸ್ಮರಣೆ ಪ್ರಭಾಷಣ ಸಮಾರೂಪ ಸಮಾರಂಭ ಮಧ್ಯಾಹ್ನ 2 ಗಂಟೆ ತನಕ ಜರಗಳಿದೆ ಈ ಕಾರ್ಯಕ್ರಮದಲ್ಲಿ ಶೈಖುನಾ ಮುತ್ತಣ್ಣೂರ್ ತಂಙಳ್ ನೌಫಲ್ ಕಳಸ. ವಾಲೆಮುಂಡವ್ ಉಸ್ತಾದ್
ಸೈಯದ್ ಪುಕುಞಿ ತಂಙಳ್ ಅಸಯ್ಯದ್ ಶಮೀಮ್ ತಂಙಳ್
ಅಸಯ್ಯದ್ ಶಿಹಾಬುದ್ದೀನ್ ತಂಙಳ್ ಕನ್ಯಾನ ಉಸ್ತಾದ್ ಮೊಹಮ್ಮದ್ ಅಲಿ ಸಖಾಫಿ ಹಾಗೂ ಹಲವು ಧಾರ್ಮಿಕ ರಾಜಕೀಯ ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ ಕಾರ್ಯಕ್ರಮದ ಕೊನೆಯಲ್ಲಿ ಸಾರ್ವಜನಿಕ ಅನ್ನದಾನ ಜರಗಳಿದೆ ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಪತ್ರಿಕಾ ಪ್ರಕಟಣೆಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷರಾದ ಅಬ್ದುಲ್ ಹಕೀಂ ಸಂಚಾಲಕರಾದ ಅಬ್ದುಲ್ ಹಮೀದ್ ಹಾಜಿ ಕೊಡಂಗಾಯಿ ತಿಳಿಸಿದ್ದಾರೆ




