February 4, 2026

ಪ್ರಖ್ಯಾತ ಪಾನ್ ಮಸಾಲ ಕಂಪನಿ ಮೇಲೆ ತೆರಿಗೆ ಇಲಾಖೆ ದಾಳಿ:
150 ಕೋಟಿ ರೂ. ಅಧಿಕ ಪತ್ತೆ

0
n3442039021640342136379a41597433f1e831f4f18e50f1aab5f77cef307f551887ca80e598770c157cffc.jpg

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಪ್ರಖ್ಯಾತ ಪಾನ್ ಮಸಾಲ ಕಂಪನಿ ಮೇಲೆ ತೆರಿಗೆ ಇಲಾಖೆ & ಜನರಲ್ ಆಫ್ ಜಿಎಸ್ಟಿ ಇಂಟೆಲಿಜೆನ್ಸ್ (ಡಿಜಿಜಿಐ) ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ 150 ಕೋಟಿ ರೂಪಾಯಿಗೂ ಅಧಿಕ ನಗದು ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಆದಾಯ ತೆರಿಕೆ ಇಲಾಖೆ ಅಧಿಕಾರಿಗಳು ಹಾಗೂ ಜಿಎಸ್​​ಟಿ ಕೌನ್ಸಿಲ್​ ಅಧಿಕಾರಿಗಳ ನೇತೃತ್ವದ ಜಂಟಿ ತಂಡ ಕಂಪನಿ ಮೇಲೆ ಗುರುವಾರ ಬೆಳಗ್ಗೆ ದಾಳಿ ಮಾಡಿದ್ದರು. ಪುಷ್ಕರ್ ಪಾನ್​ ಮಸಾಲಾ ಕಂಪನಿಯ ಮಾಲೀಕ, ಉದ್ಯಮಿ ಪಿಯೂಷ್ ಜೈನ್ ಮನೆ, ಕಚೇರಿ, ಫ್ಯಾಕ್ಟರಿ ಸೇರಿದಂತೆ ಕನೌಜ್​, ಮುಂಬೈ, ಗುಜರಾತ್​ನ ಮನೆ, ಕಚೇರಿ ಸೇರಿ ವಿವಿಧ ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ಮಾಡಲಾಗಿದೆ.

ಅಧಿಕಾರಿಗಳ ದಾಳಿ ವೇಳೆ ಕಂತೆ ಕಂತೆ ನೋಟು ಪತ್ತೆಯಾಗಿದ್ದು, ಜಿಎಸ್​ಟಿ ತೆರಿಗೆ ಪಾವತಿ ಮಾಡದೆ ಪಾನ್​​ ಮಸಾಲ ತಯಾರು ಮಾಡುತ್ತಿದ್ದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದರು. ಸದ್ಯ GST ಕಾಯ್ದೆ ಸೆಕ್ಷನ್ 69ರ ಅನ್ವಯ ಉದ್ಯಮಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!