March 22, 2026

ಕಪಿಲ್ ದೇವ್ ಮೇಲೆ ವಿಶೇಷ ಗೌರವ ಹಿನ್ನೆಲೆ:
ರಣವೀರ್ ಸಿಂಗ್ ಅಭಿನಯದ ’83’ ಸಿನಿಮಾ ತೆರಿಗೆ ಮುಕ್ತ

0
n34417447416403414244596e4e997142337505fbf7c0d31a15d28b47c12e1622a71bd0ef593fcab657b6ee.jpg

ದೆಹಲಿ: ರಣಬೀರ್ ಸಿಂಗ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ’83’ ಸಿನಿಮಾಗೆ ದೆಹಲಿ ಸರ್ಕಾರ ಅದ್ಭುತ ಗಿಫ್ಟ್ ನೀಡಿದೆ. ಕಬೀರ್ ಖಾನ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ’83’ ಅನ್ನು ದೆಹಲಿಯಲ್ಲಿ ತೆರಿಗೆ ಮುಕ್ತಗೊಳಿಸಲಾಗಿದೆ ಎಂದು ನಿರ್ಮಾಪಕರು ಘೋಷಿಸಿದ್ದಾರೆ.

ರಿಲಯನ್ಸ್ ಎಂಟರ್ಟೇನ್ಮೆಂಟ್ ಗ್ರೂಪ್ ಸಿಇಒ ಶಿಬಾಶಿಶ್ ಸರ್ಕಾರ್ ಟ್ವಿಟರ್ ನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತೆಗೆದುಕೊಂಡಿರುವ ನಿರ್ಧಾರಕ್ಕೆ ಧನ್ಯವಾದ ತಿಳಿಸಿದ್ದಾರೆ.

1983ರಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತವು ಕಪಿಲ್ ದೇವ್ ನೇತೃತ್ವದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಅದೇ ಘಟನೆಯನ್ನಾಧರಿಸಿ ’83’ ಸಿನಿಮಾ ತಯಾರಿಸಲಾಗಿದೆ. ಈ ಒಂದು ಅವಿಸ್ಮರಿಣೀಯ ಚಿತ್ರಕ್ಕೆ ತೆರಿಗೆ ಮುಕ್ತ ಮಾಡಿ ಅಂದಿನ ಭಾರತ ತಂಡದ ಕ್ಯಾಪ್ಟನ್ ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿಶೇಷ ಗೌರವ ಸಲ್ಲಿಸಿದ್ದಾರೆ.

ಇನ್ನು ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ಸಿಂಗ್ ಕಾಣಿಸಿಕೊಂಡಿದ್ದು, ’83’ ಸಿನಿಮಾ ಇಂದು ರಂದು ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂನಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.

Leave a Reply

Your email address will not be published. Required fields are marked *

error: Content is protected !!