ಕೊಲೆಯಾಗಿರುವ ಪದ್ಮಲತಾ ಕಳೇಬರವನ್ನು ಹೊರತೆಗೆದು ಮರು ತನಿಖೆ ನಡೆಸಿ: ಎಸ್‌ಐಟಿಗೆ ಪದ್ಮಲತಾ ಸಹೋದರಿ ಇಂದ್ರಾವತಿ ದೂರು
ಬೆಳ್ತಂಗಡಿ: ಅಪಹರಣ, ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾಗಿರುವ ಪದ್ಮಲತಾ ಅವರ ಕಳೇಬರವನ್ನು ಹೊರತೆಗೆದು ಮರು ತನಿಖೆ ಮಾಡಿ ಅಪರಾಧಿಗಳನ್ನು ಪತ್ತೆ ಹಚ್ಚುವಂತೆ ಕೋರಿ ಎಸ್‌ಐಟಿಗೆ ಪದ್ಮಲತಾ ಸಹೋದರಿ ಇಂದ್ರಾವತಿ ದೂರು ನೀಡಿದ್ದಾರೆ.
ಪದ್ಮಲತಾ ಅವರ ಸಹೋದರಿ ಇಂದ್ರಾವತಿ ಅವರು ಸಿಪಿಎಂ ಪಕ್ಷದ ಮುಖಂಡ ಬಿ.ಎಂ.ಭಟ್ ಹಾಗೂ ಇತರರೊಂದಿಗೆ ಎಸ್‌ಐಟಿ ಕಚೇರಿಗೆ ಆಗಮಿಸಿದ್ದರು.
ಸುಮಾರು 39 ವರ್ಷಗಳ ಹಿಂದೆ ಅಂದರೆ 1986ರಲ್ಲಿ ಬೋಳಿಯಾರು ನಿವಾಸಿ ಪದ್ಮಲತಾ ಅವರನ್ನು ಅತ್ಯಾಚಾರಗೈದು ಕೊಲೆಗೈಯಲಾಗಿತ್ತು.





