ಆ.15ರಿಂದ ಎಲ್ಲ ಟೋಲ್‌ಗಳಲ್ಲಿ ವಾರ್ಷಿಕ ಫಾಸ್ಟ್ಯಾಗ್ ಪಾಸ್
ನವದೆಹಲಿ: 3,000 ರೂ. ಪಾವತಿಸಿ ದೇಶದ ಯಾವುದೇ ಟೋಲ್‌ಗಳಲ್ಲಿ ಒಂದು ವರ್ಷ ಅಥವಾ 200 ಟ್ರಿಪ್‌ಗೆ ಅನುಮತಿಸುವ ವಾರ್ಷಿಕ ಫಾಸ್ಟ್ಯಾಗ್ ಪಾಸ್ (FASTag Annual Pass) ಆ.15ರಿಂದ ಲಭಿಸಲಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಫಾಸ್ಟ್‌ಟ್ಯಾಗ್‌ಗಳಿಗಾಗಿ ಹೊಸ ವಾರ್ಷಿಕ ಪಾಸ್ ಅನ್ನು ಜೂನ್ ತಿಂಗಳಲ್ಲಿ ಘೋಷಿಸಿತ್ತು. ಪಾಸ್‌ಗಳ ವಿತರಣಾ ಕಾರ್ಯಕ್ಕೆ ಆ.15ರಂದು ಚಾಲನೆ ಸಿಗಲಿದೆ. ಈ ಪಾಸ್ ಇದ್ದವರು, ಖಾಸಗಿ ಕಾರುಗಳು/ಜೀಪ್‌ಗಳು/ವ್ಯಾನ್‌ಗಳನ್ನು ಗೊತ್ತುಪಡಿಸಿದ ರಾಷ್ಟ್ರೀಯ ಹೆದ್ದಾರಿ (NH) ಮತ್ತು ರಾಷ್ಟ್ರೀಯ ಮೋಟಾರುಮಾರ್ಗ (NE) ಶುಲ್ಕ ಪ್ಲಾಜಾಗಳಲ್ಲಿ ಒಂದು ವರ್ಷ ಅಥವಾ 200 ಟ್ರಿಪ್ ಹೋಗಬಹುದು. ಪ್ರತಿ ಬಾರಿ ಟೋಲ್ ಶುಲ್ಕ ಕೊಡುವುದು ತಪ್ಪುತ್ತದೆ.
ವಾರ್ಷಿಕ ಪಾಸ್ ಆ.15 ರಿಂದ ಜಾರಿಗೆ ಬರಲಿದ್ದು, ಟೋಲ್ ಬೂತ್‌ಗಳಲ್ಲಿ ಕಾಯುವ ಸಮಯ, ದಟ್ಟಣೆ ಮತ್ತು ಸಂಘರ್ಷಗಳನ್ನು ಕಡಿಮೆ ಮಾಡಲು ವಿನ್ಯಾಸಗೊಳಿಸಲಾಗಿದೆ. ಇದರ ಪರಿಣಾಮವಾಗಿ ಲಕ್ಷಾಂತರ ಖಾಸಗಿ ಕಾರು ಮಾಲೀಕರಿಗೆ ಅನುಕೂಲಕರ ಪ್ರಯಾಣದ ಅನುಭವ ಸಿಗುತ್ತದೆ.





