December 15, 2025

ಪುತ್ತೂರು: 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ದಸ್ತಗಿರಿ: ಜಾಮೀನು ಪಡೆದ ಬಳಿಕ ಮಾನ್ಯ ನ್ಯಾಯಾಲಯದ ಅದೇಶ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಮತ್ತೊಂದು ಪ್ರಕರಣ ದಾಖಲು

0
IMG-20250801-WA0005.jpg

ಪುತ್ತೂರು: ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅ.ಕ್ರ 35/2001 ಕಲಂ: 379 ಜೊತೆಗೆ 34 ಭಾ.ದಂ.ಸಂ ನೇ ಪ್ರಕರಣದಲ್ಲಿ ಆರೋಪಿತನಾಗಿ 2018 ರಲ್ಲಿ ಜಾಮೀನು ಪಡೆದ ನಂತರ, ಮಾನ್ಯ ನ್ಯಾಯಾಲಯದ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಮಹಮ್ಮದ್ ಹನೀಫ್ (55), ವಾಸ:ಸೋಮವಾರ ಪೇಟೆ, ಕೊಡಗು ಮಡಿಕೇರಿ ಎಂಬಾತನನ್ನು ಕೊಡಗು ಜಿಲ್ಲೆಯ ಕುಶಾಲನಗರ ಎಂಬಲ್ಲಿ ಪತ್ತೆ ಮಾಡಿ ವಶಕ್ಕೆ ಪಡೆದುಕೊಳ್ಳಲಾಗಿದೆ.

ಮಾನ್ಯ ನ್ಯಾಯಾಲಯದ ಅದೇಶವನ್ಬು ಉಲ್ಲಂಘಿಸಿ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಆರೋಪಿತನ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕಲಂ: 269 ಬಿ.ಎನ್ ಎಸ್ ರಂತೆ ಪ್ರಕರಣ ದಾಖಲು ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ, ಸದ್ರಿ ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

Leave a Reply

Your email address will not be published. Required fields are marked *

You may have missed

error: Content is protected !!