ಸೆಲ್‌ನ ಕಬ್ಬಿಣದ ಸರಳು ಕತ್ತರಿಸಿ ಅತ್ಯಾಚಾರ ಆರೋಪಿ ಜೈಲಿನಿಂದ ಪರಾರಿ
ಕೇರಳದ ಕಣ್ಣೂರು ಸೆಂಟ್ರಲ್ ಜೈಲಿನಲ್ಲಿದ್ದ ಅತ್ಯಾಚಾರ ಮತ್ತು ಕೊಲೆ ಅಪರಾಧಿ ಗೋವಿಂದಚಾಮಿ ಯಾನೆ ಚಾರ್ಲಿ ಥಾಮಸ್ ಪರಾರಿಯಾದ ಘಟನೆ ಶುಕ್ರವಾರ ಮುಂಜಾನೆ ಸಂಭವಿಸಿದೆ.
23 ವರ್ಷ ಪ್ರಾಯದ ಮಹಿಳೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಗೋವಿಂದಚಾಮಿಯನ್ನು ಕಣ್ಣೂರು ಸೆಂಟ್ರಲ್ ಜೈಲಿನಲ್ಲಿ ಇರಿಸಲಾಗಿತ್ತು. ಬೆಳಗಿನ ಜಾವ 1.15 ರ ಸುಮಾರಿಗೆ ಆತ ಜೈಲಿನಿಂದ ತಪ್ಪಿಸಿಕೊಂಡಿದ್ದಾನೆ.
ಬೆಳಿಗ್ಗೆ 5:15 ರ ಸುಮಾರಿಗೆ ಜೈಲಿನ ಅಧಿಕಾರಿಗಳು ಪರೇಡ್ ಮೈದಾನಕ್ಕೆ ತೆರಳಿದ್ದ ವೇಳೆ ಗೋಡೆಯ ಕೆಳಗೆ ಬಟ್ಟೆಯಿಂದ ಮಾಡಿದ ಹಗ್ಗವನ್ನು ನೇತುಹಾಕಿರುವುದನ್ನು ಗಮನಿಸಿದ್ದಾರೆ. ಇದರಿಂದ ಅನುಮಾನಗೊಂಡ ಅಧಿಕಾರಿಗಳು ಸೆಲ್‌ಗಳನ್ನು ಪರಿಶೀಲಿಸಿದಾಗ ಗೋವಿಂದಚಾಮಿ ಸೆಲ್‌ನ ಕಬ್ಬಿಣದ ಸರಳುಗಳನ್ನು ಕತ್ತರಿಸಿ ಗೊತ್ತಾಗಿದೆ.




