March 13, 2026

ಅಶ್ಲೀಲ ಕಂಟೆಂಟ್: 25 ಒಟಿಟಿ ಅಪ್ಲಿಕೇಶನ್ ಮೇಲೆ ನಿಷೇಧ ಹೇರಿದ ಕೇಂದ್ರ ಸರ್ಕಾರ

0
image_editor_output_image-2075298035-1753433551485.jpg

ಭಾರತದಲ್ಲಿ ಅಶ್ಲೀಲ ಕಂಟೆಂಟ್ಗೆ ಬಹಳ ಜನಪ್ರಿಯವಾಗಿರುವ ಆಪ್ಗಳೆಂದರೆ ಉಲ್ಲು ಮತ್ತು ಆಲ್ಟ್ ಬಾಲಾಜಿ. ಈ ಎರಡೂ ಒಟಿಟಿಗಳು ಸೇರಿದಂತೆ ಬರೋಬ್ಬರಿ 25 ಒಟಿಟಿ ಮತ್ತು ಅಪ್ಲಿಕೇಶನ್ಗಳ ಮೇಲೆ ನಿಷೇಧ ಹೇರಿ ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಇಲಾಖೆಯು ಆದೇಶ ಹೊರಡಿಸಿದೆ.

ಉಲ್ಲು ಮತ್ತು ಆಲ್ಟ್ ಬಾಲಾಜಿ ಒಟಿಟಿಗಳು ಭಾರತದ ಟಾಪ್ 10 ಒಟಿಟಿಗಳಲ್ಲಿ ಸ್ಥಾನ ಪಡೆದಿದ್ದವು ಆದರೆ ಈಗ ಅವುಗಳ ಮೇಲೆ ಸರ್ಕಾರ ನಿಷೇಧ ಹೇರಿದೆ.

ಈ ಒಟಿಟಿಗಳು ಭಾರತದ ಪ್ರಸಾರ ಕಾಯ್ದೆಯನ್ನು ಉಲ್ಲಂಘಿಸಿ ಅಶ್ಲೀಲ ಕಂಟೆಂಟ್ ಅನ್ನು ಪ್ರಚಾರ ಮತ್ತು ಪ್ರಸಾರ ಮಾಡುತ್ತಿವೆ ಎಂಬ ಕಾರಣ ನೀಡಿ ಮಾಹಿತಿ ಮತ್ತು ಪ್ರಸಾರ ಇಲಾಖೆಯು 25 ಒಟಿಟಿಗಳ ಮೇಲೆ ನಿಷೇಧ ಹೇರಿದೆ. ಈ ಅಪ್ಲಿಕೇಶನ್, ಒಟಿಟಿಗಳು ಪ್ರಸ್ತುತ ಭಾರತದಲ್ಲಿ ಮಾತ್ರವೇ ನಿಷೇಧಗೊಳ್ಳಲಿವೆ. ಭಾರತದ ಹೊರಗೆ ಈ ಒಟಿಟಿಗಳು ಕಾರ್ಯ ನಿರ್ವಹಿಸಲಿವೆ.

Leave a Reply

Your email address will not be published. Required fields are marked *

error: Content is protected !!