ಬಾಯ್ಸ್ ಹಾಸ್ಟೆಲ್‌ನಲ್ಲಿ ಯುವತಿಯ ಅತ್ಯಾಚಾರ: ಯುವಕನ ಬಂಧನ
ಬಾಗಲಕೋಟೆ: ಯುವತಿಯನ್ನು ಹಾಸ್ಟೆಲ್‌ಗೆ ಕರೆಸಿಕೊಂಡು ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಮೂಲದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಲೋಕಾಪುರ ಪಟ್ಟಣದ ನಿವಾಸಿ ಪರಮಾನಂದ ಟೋಪಣ್ಣನವರ್ ಎಂದು ಗುರುತಿಸಲಾಗಿದೆ. ಈತ ಕೊಲ್ಕತ್ತಾದ ಜೋಕಾದಲ್ಲಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್‌ನಲ್ಲಿ ಎರಡೇ ವರ್ಷದ ಎಂಬಿಎ ವ್ಯಾಸಾಂಗ ಮಾಡುತ್ತಿದ್ದ.
ಆರೋಪಿಯ ವಿರುದ್ಧ ಯುವತಿ, ಹಾಸ್ಟೆಲ್‌ಗೆ ಕರೆಸಿಕೊಂಡು ಫಿಜ್ಜಾ ತಿನ್ನಿಸಿ ಮತ್ತು ಬರುವ ಪಾನೀಯ ಕುಡಿಸಿ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಜು.12 ರಂದು ಆರೋಪಿ ಪರಮಾನಂದನನ್ನ ಪೊಲೀಸರು ಬಂಧಿಸಿದ್ದರು. ಇದರ ನಡುವೆ ಅತ್ಯಾಚಾರ ಆರೋಪವನ್ನು ಯುವತಿ ಕುಟುಂಬಸ್ಥರು ತಳ್ಳಿಹಾಕಿದ್ದರು.




