ಫರಂಗಿಪೇಟೆ: ಅಮೆಮ್ಮಾರ್ ನಲ್ಲಿ ಗುಡ್ಡ ಕುಸಿದುಬಿದ್ದು ಮನೆಗೆ ಹಾನಿ
ಫರಂಗಿಪೇಟೆ: ಭಾರೀ ಮಳೆಗೆ ಪುದು ಗ್ರಾಮದ ಅಮೆಮ್ಮಾರ್ ನಲ್ಲಿ ಗುಡ್ಡ ಕುಸಿದುಬಿದ್ದ ಪರಿಣಾಮ ಮನೆಯೊಂದು ಹಾನಿಯಾಗಿದೆ.
ಅಮೆಮ್ಮಾರ್ ನ ಝುಬೈರ್ ಎಂಬವರ ಮನೆಯ ಹಿಂಬದಿಯ ಗುಡ್ಡೆ ಜರಿದು ಮನೆಗೆ ಹಾನಿಯಾಗಿದೆ.
ಅಮೆಮ್ಮಾರ್ ಭಾಗದಲ್ಲಿ ಗುಡ್ಡ ಇನ್ನಷ್ಟು ಕುಸಿಯುವ ಅಪಾಯವಿದ್ದು, ಕೆಲವು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷ ರಶೀದಾ, ಗ್ರಾಮದ ಲೆಕ್ಕಾಧಿಕಾರಿ ಅಶ್ವಿನಿ, ಗ್ರಾಪಂ ಸದಸ್ಯರಾದ ಶಾಫಿ ಅಮೆಮ್ಮಾರ್, ಸಾರಾ, ಆತಿಕಾ, ರುಕ್ಸಾನ ಭೇಟಿ ನೀಡಿ ಪರಿಶೀಲನೆ ನಡೆಸಿದರು.





