ಉಳ್ಳಾಲ: ಟಯರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ಹೃದಯಾಘಾತದಿಂದ ವ್ಯಕ್ತಿ ಸಾವು
ಮಂಗಳೂರು: ಟಯರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ಹೃದಯಾಘಾತಕ್ಕೊಳಗಾಗಿ ಉಳ್ಳಾಲದ ಪಂಡಿತ್ ಹೌಸ್ ನಿವಾಸಿಯೋರ್ವರು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಮಂಗಳೂರು ಪದವಿನಂಗಡಿ ಅಜ್ಜನಕಟ್ಟೆ ಸಮೀಪದ ಟಯರ್ ಅಂಗಡಿಯಲ್ಲಿ ನಡೆದಿದೆ.
ವಿಜೇತ ನಗರ ಗಂಡಿ ನಿವಾಸಿ ವೇಣುಗೋಪಾಲ ಅವರು ಮೃತಪಟ್ಟ ಅವಿವಾಹಿತರಾಗಿದ್ದಾರೆ.
ಇವರು ಹಲವು ವರ್ಷಗಳಿಂದ ಟಯರ್ ಅಂಗಡಿಯಲ್ಲಿ ಟೆಕ್ನಿಷಿಯನ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಇದೀಗ ಇವರು ತಾಯಿ, ಸೋದರಿ ಮತ್ತು ಸಹೋದರನನ್ನು ಅಗಲಿದ್ದಾರೆ.





