ನಿರಂತರ ಸುರಿದ ಮಳೆಗೆ ಕುಸಿದು ಬಿದ್ದ ಮನೆ: 2 ವರ್ಷದ ಮಗು ಸಾವು
ಗಂಗಾವತಿ : ನಿರಂತರ ಸುರಿದ ಮಳೆಯಿಂದಾಗಿ ಮನೆ ಕುಸಿದು ಬಿದ್ದ ಪರಿಣಾಮ ಮಗು ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ನಡೆದಿದೆ.
ಹೆಬ್ಬಾಳ ಗ್ರಾಮದ 2 ವರ್ಷದ ಪ್ರಶಾಂತಿ ಮೃತಪಟ್ಟ ಮಗು. ಮಗುವಿನ ತಾಯಿ ಹನುಮಂತಿ, ಕುಟುಂಬ ಸದಸ್ಯರಾದ ದುರಗಮ್ಮ, ಭೀಮಮ್ಮ, ಹಸೇನಪ್ಪ, ಫಕೀರಪ್ಪ ಗಂಭೀರವಾಗಿ ಗಾಯಗೊಂಡಿದ್ದಾರೆ.
ಹನುಮಂತಿ ಮಗುವಿನೊಂದಿಗೆ ಇತ್ತೀಚೆಗಷ್ಟೆ ತವರು ಮನೆಗೆ ಬಂದಿದ್ದರು. ಬುಧವಾರ(ಜು.16) ತಡರಾತ್ರಿ ಮನೆಯ ಛಾವಣಿ ಹಾಗೂ ಗೋಡೆಯ ಕಲ್ಲುಗಳು ಮನೆಯವರ ಮೇಲೆ ಬಿದ್ದಿದೆ.





