ಯೆಮನ್: ಕೇರಳದ ನರ್ಸ್ ನಿಮಿಷ ಪ್ರಿಯಾಳ ಮರಣದಂಡನೆ ಶಿಕ್ಷೆ ಮುಂದೂಡಿಕೆ
ಯೆಮನ್: ಯೆಮೆನ್ ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷ ಪ್ರಿಯಾಳ ಮರಣದಂಡನೆಯನ್ನು ಮುಂದೂಡಿರುವುದಾಗಿ ವರದಿಯಾಗಿದೆ.
2017ರಲ್ಲಿ ತನ್ನ ಯೆಮೆನ್‌ನ ವ್ಯವಹಾರ ಪಾಲುದಾರ ತಲಾಲ್ ಅಬ್ಬೋ ಮಹಿ ಕೊಲೆಗೆ ಗಲ್ಲು ಶಿಕ್ಷೆಗೆ ನಿಮಿಷ ಪ್ರಿಯಾ ಒಳಗಾಗಿದ್ದರು. ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರ ಮಾತುಕತೆ ಬಳಿಕ ಪ್ರಸಿದ್ದ ಸೂಫಿ ವಿದ್ವಾಂಸ ಶೇಖ್ ಹಬೀಬ್ ಉಮರ್ ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಿದ್ದರು.





