March 13, 2026

ಅಂಗಡಿಗೆ ಹೋಗುತ್ತಿದ್ದಾಗ ಕೋತಿಗಳು ದಾಳಿ: ಮೂರುವರೆ ವರ್ಷದ ಬಾಲಕಿ ಸಾವು

0
image_editor_output_image-1882966322-1752476710121.jpg

ವಿಜಯನಗರ: ಕೋತಿಗಳ ದಾಳಿಗೆ ಮೂರುವರೆ ವರ್ಷದ ಪುಟ್ಟ ಬಾಲಕಿ ಸಾವನ್ನಪ್ಪಿದ ಘಟನೆ ಹೊಸಪೇಟೆಯ ಚಲುವಾದಿ ಕೇರಿಯಲ್ಲಿ ನಡೆದಿದೆ.

ಅನನ್ಯಾ ಮೃತಪಟ್ಟ ಬಾಲಕಿ ಎಂದು ಗುರುತಿಸಲಾಗಿದೆ. ಜೂ.28ರಂದು ತನ್ನ ತಂದೆಯ ಜೊತೆ ಮೊಸರು ತರಲೆಂದು ಅಂಗಡಿಗೆ ಹೋಗುತ್ತಿದ್ದಾಗ ಕೋತಿ ದಾಳಿ ಮಾಡಿದೆ. ಅಂದು ರಾತ್ರಿಯೇ ಬಾಲಕಿಯ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಹೆಚ್ಚಿನ ಚಿಕಿತ್ಸೆಗೆ ಜು.2ರಂದು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಿದಾಗ ಬಾಲಕಿ ಕೋಮಾಗೆ ಹೋಗಿದ್ದಳು. ಚಿಕಿತ್ಸೆ ಮುಂದುವರಿಸಿದ್ದರೂ ಫಲಕಾರಿ ಆಗದೆ ಮೃತಪಟ್ಟಿದ್ದಾಳೆ.

Leave a Reply

Your email address will not be published. Required fields are marked *

error: Content is protected !!