ಚಿಕ್ಕಮಗಳೂರು: ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಯುವಕ ಕುಸಿದು ಬಿದ್ದು ಸಾವು
ಚಿಕ್ಕಮಗಳೂರು: ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಯುವಕ ಚಿಕ್ಕಮಗಳೂರಿನಲ್ಲಿ ಬಲಿಯಾದ ಘಟನೆ ನಡೆದಿದೆ.
30 ವರ್ಷ ಪ್ರಾಯದ ರಾಹುಲ್ ಮೃತ ಯುವಕ. ಈತ ಕಾಫಿನಾಡಿನ ಸೌಂದರ್ಯವನ್ನು ಸವಿಯಲು ಪ್ರವಾಸಕ್ಕೆಂದು ಎರಡು ದಿನದ ಹಿಂದೆ ಚಿಕ್ಕಮಗಳೂರಿಗೆ ಬಂದಿದ್ದನು. ಬಳಿಕ ಅಲ್ಲಿನ ಹೋಂ ಸ್ಟೇ ಯಲ್ಲಿ ತಂಗಿದ್ದನು.
ಮಧ್ಯಾಹ್ನವಾದರೂ ಬಾಗಿಲು ತೆರೆಯದ ಹಿನ್ನೆಲೆ ಹೋಂ ಸ್ಟೇ ಮಾಲೀಕರು ಹಾಗೂ ಸ್ನೇಹಿತರು ಬಾಗಿಲು ತೆಗೆದು ನೋಡಿದಾಗ ಪ್ರಜ್ಞೆ ಇಲ್ಲದೆ ಬಿದ್ದಿದ್ದ. ಎಲ್ಲರೂ ಆತನನ್ನ ಎಬ್ಬಿಸುವ ಪ್ರಯತ್ನ ಮಾಡಿದ್ದರು.




