February 1, 2026

ಕೆ ಎಫ್ ಸಿ ಫ್ರೈಡ್ ಚಿಕನ್ ನಲ್ಲಿ ಕೋಳಿಯ ತಲೆ ಪತ್ತೆ!

0
Screenshot_20211223-173812_Chrome.jpg

ಯುಕೆ: ಮಹಿಳೆಯೊಬ್ಬರು ಆರ್ಡರ್ ಮಾಡಿದ್ದ ಕೆ ಎಫ್ ಸಿ ಚಿಕನ್ ನಲ್ಲಿ ಕೋಳಿಯ ಇಡಿಯಾದ ತಲೆ ಸಿಕ್ಕಿದೆ. ಈ ಬಗ್ಗೆ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಎಲ್ಲೆಡೆ ವೈರಲ್ ಆಗಿದೆ.

ಗೆಬ್ರಿಯಲ್ ಎನ್ನುವ ಮಹಿಳೆ ಈ ಚಿಕನ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಗೆಬ್ರಿಯಲ್ ಕೋಳಿಯ ತಲೆ ಪತ್ತೆಯಾಗಿದ್ದರ ಫೊಟೋ ಹಂಚಿಕೊಂಡಿದ್ದಾರೆ. ನೆಟ್ಟಿಗರು ಅದನ್ನು ನೋಡಿ ಅಸಹ್ಯದ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಗೆಬ್ರಿಯಲ್ ನಾನು ಇಷ್ಟಪಟ್ಟು ತರಿಸಿದ್ದ ಚಿಕನ್ ನಲ್ಲಿ ಕೋಳಿಯ ತಲೆಯನ್ನು ನೋಡಿ ಗಾಬರಿಗೊಂಡಿದ್ದೇನೆ. ಊಟವನ್ನು ಮುಂದುವರೆಸಲು ಸಾಧ್ಯವಾಗುತ್ತಿಲ್ಲ. ನೀವೂ ಆಹಾರವನ್ನು ತರಿಸಿಕೊಳ್ಳುವ ಮೊದಲು ಎಚ್ಚರವಹಿಸಿ ಎಂದು ಬರೆದುಕೊಂಡಿದ್ದಾರೆ.

ಈ ಹಿಂದೆ ಘಾನ ದೇಶದಲ್ಲಿ ಮಹಿಳೆಯೊಬ್ಬರಿಗೆ ಹೊಟೇಲ್ ವೊಂದರಲ್ಲಿ ಊಟ ಮಾಡುವಾಗ ಮರ್ಮಾಂಗ ಸಿಕ್ಕಿತ್ತು. ಈ ಬಗ್ಗೆ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಬೀದಿ ಬದಿ ಆಹಾರವನ್ನು ತಿನ್ನುವ ಮೊದಲು ಎಚ್ಚರಿಕೆವಹಿಸುವಂತೆ ಹೇಳಿದ್ದರು.

Leave a Reply

Your email address will not be published. Required fields are marked *

error: Content is protected !!