February 1, 2026

ಸುಳ್ಯ: ಪಾಣತ್ತೂರು ಬಳಿ ಲಾರಿ ಪಲ್ಟಿ:
ನಾಲ್ಕು ಮಂದಿ ಕಾರ್ಮಿಕರು ಮೃತ್ಯು

0
IMG-20211223-WA0011.jpg

ಸುಳ್ಯ: ಕಲ್ಲಪಳ್ಳಿಯ ದೊಡ್ಡಮನೆ ಎಂಬಲ್ಲಿಯಿಂದ ಕಟ್ಟಿಂಗ್ ಮಾಡಿದ ರಬ್ಬರ್ ಮರದ ದಿಮ್ಮಿಗಳನ್ನು ಹೇರಿಕೊಂಡು ಕೇರಳದ‌ ಪಾಣತ್ತೂರು ಕಡೆಗೆ ‌ಸಂಚರಿಸುತ್ತಿದ್ದ ಲಾರಿ ಬ್ರೇಕ್ ವೈಫಲ್ಯಗೊಂಡು ಪಲ್ಟಿಯಾಗಿ ಲಾರಿಯಲ್ಲಿದ್ದ ಕಾರ್ಮಿಕರ ಪೈಕಿ ನಾಲ್ಕು ಮಂದಿ ದುರ್ಮರಣಕ್ಕೀಡಾಗಿರುವ ಘಟನೆ ಇಂದು ಸಂಜೆ ವರದಿಯಾಗಿದೆ.

ಲಾರಿಯಲ್ಲಿ ರಬ್ಬರ್ ಮರದ ದಿಮ್ಮಿಗಳ ಹೇರಿದ ಮೇಲೆ ಕಾರ್ಮಿಕರು ಅದರ ಮೇಲೆ ಕುಳಿತುಕೊಂಡಿದ್ದರು ಎಂದು ತಿಳಿದುಬಂದಿದೆ. ಒಟ್ಟು 9 ಮಂದಿ ಕಾರ್ಮಿಕರಿದ್ದು ಒಂದಿಬ್ಬರು ಕಾರ್ಮಿಕರು ಪಲ್ಟಿಯಾಗುವ ಸಂದರ್ಭ ಹಾರಿಪ್ರಾಣಾಪಾಯದಿಂದ ಪಾರಾಗಿದ್ದು,‌ ಉಳಿದವರು ಗಂಭೀರವಾಗಿ ಗಾಯಗೊಂಡು ನಾಲ್ಕು ಮಂದಿ ಕಾರ್ಮಿಕರು ಮರದ ದಿಮ್ಮಿಗಳಡಿಯಲ್ಲಿ ಸಿಲುಕಿ ಮೃತಪಟ್ಟಿರುತ್ತಾರೆ. ಸ್ಥಳೀಯ ಜನರು ಸೇರಿ‌ ಮರದ ದಿಮ್ಮಿಗಳ ನಡುವೆ ಸಿಲುಕಿದವರನ್ನು ಎತ್ತಿ ಕಾಂಞಂಗಾಡ್ ಬಳಿಯ‌ ಕೂಡಂಗಲ್ ಜಿಲ್ಲಾಸ್ಪತ್ರೆಗೆ ದಾಖಲಿಸಿದರು.

ಲಾರಿ‌ ಬ್ರೇಕ್ ಫೈಲ್ ಆದ್ದರಿಂದ ‌ಇಳಿಜಾರಿನಲ್ಲಿ ವೇಗವಾಗಿ ಚಲಿಸಿ ಕೆಳ ಭಾಗದಲ್ಲಿದ್ದ ಮನೆಗೆ ಗುದ್ದಿ ಪಲ್ಟಿಯಾಗಿರುವುದಾಗಿ ಸ್ಥಳೀಯರು ತಿಳಿಸಿರುತ್ತಾರೆ.
ಇದೇ ಪರಿಸರದಲ್ಲಿ ಕಳೆದ ಕೆಲವು ತಿಂಗಳುಗಳ ಹಿಂದೆ ಬಸ್ ಪಲ್ಟಿಯಾಗಿ ಹಲವಾರು ಮಂದಿ ಜಖಂಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!