8ನೇ ತರಗತಿಯ ವಿಧ್ಯಾರ್ಥಿಗೆ 13 ಬಾರಿ ಚಾಕುವಿನಿಂದ ಇರಿತ: ಆರೋಪಿಯ ಬಂಧನ
ಬಿಹಾರ್: 8 ನೇ ತರಗತಿ ಹುಡುಗಿಯೊಬ್ಬಳಿಗೆ ಯುವಕನೊಬ್ಬ 13 ಸೆಕೆಂಡ್ ಗಳಲ್ಲಿ 8 ಬಾರಿ ಇರಿದ ಘಟನೆ ಬಿಹಾರದ ಗೋಪಾಲ ಗಂಜ್ ನಲ್ಲಿ ನಡೆದಿದೆ.
ಯುವಕ ತುಂಬ ದಿನಗಳಿಂದಲೂ ಬಾಲಕಿಯನ್ನು ಹಿಂಬಾಲಿಸುತ್ತಲೇ ಇದ್ದ. ದೌರ್ಜನ್ಯವನ್ನು ಎಸಗುತ್ತಿದ್ದ. ಆದರೆ ಬಾಲಕಿ ಅದನ್ನ ಪ್ರತಿರೋಧಿಸುತ್ತಲೇ ಬಂದಿದ್ದಳು. ಆದರೆ, ಡಿ.19ರಂದು ಯುವಕ ಬಾಲಕಿಯನ್ನು ಚಾಕುವಿನಿಂದ ಇರಿದು ಕ್ರೌರ್ಯ ತೋರಿದ್ದಾನೆ.
ಅಂದು ಬಾಲಕಿ ತನ್ನ ಇಬ್ಬರು ಸ್ನೇಹಿತರೊಂದಿಗೆ ಎಲ್ಲಿಗೋ ಹೋಗಿದ್ದವಳು ಹಿಂತಿರುಗಿ ಮನೆಗೆ ವಾಪಸ್ ಬರುತ್ತಿದ್ದಳು. ಈ ಯುವಕ ತನ್ನಿಬ್ಬರು ಸಹಾಯಕರೊಂದಿಗೆ ಆಕೆ ಬರುವ ರಸ್ತೆಯಲ್ಲೇ ಅಡಗಿಕುಳಿತಿದ್ದ. ಬಾಲಕಿಯನ್ನು ಕಾಣುತ್ತಿದ್ದಂತೆ, ಒಮ್ಮೆಲೇ ಬಂದು ಚಾಕುವಿನಿಂದ ದಾಳಿ ಮಾಡಿದ್ದಾನೆ. 13 ಸೆಕೆಂಡ್ ಗಳಲ್ಲಿ ಒಟ್ಟು ಎಂಟು ಬಾರಿ ಆಕೆಗೆ ಚಾಕು ಹಾಕಿದ್ದಾನೆ ಎಂದು ಹೇಳಲಾಗಿದೆ. ಬಾಲಕಿಯ ಪರಿಸ್ಥಿತಿ ಗಂಭೀರವಾಗಿದ್ದು, ಮೊದಲು ಗೋಪಾಲ ಗಂಜ್ ನ ಸಾದರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಸಾಧ್ಯವಾಗದೆ ಪಾಟ್ನಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಘಟನೆ ನಡೆದ ಜಾಗದಲ್ಲಿದ್ದ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಬಾಲಕಿಗೆ ಚಾಕು ಇರಿಯುವ ಯುವಕನನ್ನು ಆತನ ಜತೆಗಿದ್ದ ಇನ್ನೊಬ್ಬಾತ ಹಿಡಿದು ಎಳೆಯುತ್ತಾನೆ. ಹಾಗಿದ್ದರೂ ಕೂಡ ಅವನು ತನ್ನ ಕೃತ್ಯ ನಿಲ್ಲಿಸಲಿಲ್ಲ ಮತ್ತು ಬಾಲಕಿಯನ್ನು ಇರಿದಿದ್ದಾನೆ. ಸಿಸಿಟಿವಿ ಫೂಟೇಜ್ ಆಧರಿಸಿ ಪೊಲೀಸರು ಯುವಕನನ್ನ ಬಂಧಿಸಿದ್ದಾರೆ.