ಉಪ್ಪಿನಂಗಡಿ: ತೆಕ್ಕಾರಿನಲ್ಲಿ ಸಂಭ್ರಮದ ಬಕ್ರೀದ್ ಆಚರಣೆ: ಜಿಲ್ಲೆಯ ಶಾಂತಿಗಾಗಿ ಮತ್ತು ಫೆಲಸ್ತೀನ್ ಜನತೆಗಾಗಿ ಪ್ರತ್ಯೇಕವಾಗಿ ಪ್ರಾರ್ಥಿಸಿದ ಮುಸಲ್ಮಾನ ಭಾಂದವರು
ಉಪ್ಪಿನಂಗಡಿ: ಪವಿತ್ರವಾದ ಬಕ್ರೀದ್ ಹಬ್ಬವನ್ನು ತೆಕ್ಕಾರಿನಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಕೇಂದ್ರ ಜುಮಾ ಮಸ್ಜಿದ್ ತೆಕ್ಕಾರುನಲ್ಲಿ ಬಕ್ರೀದ್ ಸಂದೇಶ ನೀಡಿದ ಉಸ್ತಾದ್ ಅಬ್ದುಲ್ ಮಜೀದ್ ಸಖಾಫಿ ಮಾತನಾಡಿ ಇಸ್ಮಾಯಿಲ್ ನೆಬಿ ಮತ್ತು ಇಬ್ರಾಹಿಂ ನೆಬಿಯವರ ತ್ಯಾಗೋಜ್ವಲವಾದ ಬಲಿದಾನದ ಪ್ರತೀಕವೇ ಈ ಪುಣ್ಯ ಬಕ್ರೀದ್.
ತ್ಯಾಗ ಮತ್ತು ಸಹನೆಯ ಪ್ರತೀಕವಾಗಿದೆ ಈ ಹಬ್ಬ ಎಂದು ಅವರು ಬಕ್ರೀದ್ ನ ವಿಶೇಷ ಪ್ರಾರ್ಥನೆಗೆ ಸೇರಿದ ಜನರನ್ನುದ್ದೇಶಿಸಿ ಮಾತನಾಡಿದರು.
ಇದೇ ವೇಳೆ ಜಿಲ್ಲೆಯ ಶಾಂತಿಗಾಗಿ ಮತ್ತು ಫೆಲಸ್ತೀನ್ ಜನತೆಗಾಗಿ ಪ್ರತ್ಯೇಕವಾಗಿ ಪ್ರಾರ್ಥಿಸಲಾಯಿತು.
ತದ ನಂತರ ಪರಸ್ಪರ ಆಲಿಂಗಾನ ಮಾಡಿ ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.




