March 22, 2026

ಐರಾವತ ಬಸ್ಸಿಗೆ ಡಿಕ್ಕಿ ಹೊಡೆದ ಹಸು: ಬಸ್ಸಿಗೆ ಹಾನಿ, ದನ ಸಾವು

0
IMG-20211222-WA0049

ಹಾಸನ: ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಕೆಎಸ್ಆರ್ಟಿಸಿ ನಿಗಮದ ಐರಾವತ ಬಸ್ಸಿಗೆ ಹಸು ಅಡ್ಡ ಬಂದ ಪರಿಣಾಮ ಹಸುವಿಗೆ ಡಿಕ್ಕಿ ಹೊಡೆದ ಬಸ್ಸಿಗೆ ಹಾನಿಯಾಗಿದ್ದು ಹಸು ಸ್ಥಳದಲ್ಲೇ ಸಾವನ್ನಪ್ಪಿದೆ.

ಹಾಸನ ಸಮೀಪದ ಶಾಂತಿನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ   ಇಂದು(ಬುಧವಾರ) ಮಧ್ಯಾಹ್ನ ಘಟನೆ ಸಂಭವಿಸಿದೆ. ಪ್ರಯಾಣಿಕರಿಗೆ ಬದಲಿ ಬಸ್ಸಿನ ವ್ಯವಸ್ಥೆಯನ್ನು ನಿಗಮದ ಅಧಿಕಾರಿಗಳು ಮಾಡಿದ್ದಾರೆ. ಸ್ಥಳಕ್ಕೆ ಬಂದ ಶಾಂತಿನಗರ ಪೊಲೀಸರು ಬಸ್ಸನ್ನು ತೆರೆವುಗೊಳಿಸಿದ್ದಾರೆ.

ಹಸು ಏಕಾಏಕಿ ಹೆದ್ದಾರಿಗೆ ಅಡ್ಡ ಬಂದ ಕಾರಣ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!