August 20, 2026

ಬ್ರಹ್ಮಾವರ: ಚಾಲಕನ ನಿಯಂತ್ರಣ ತಪ್ಪಿ ಉರುಳಿದ ಕಾರು:
ಒಬ್ಬ ಮೃತ್ಯು- ಮಹಿಳೆ ಗಂಭೀರ

0
image_editor_output_image-432055661-1640146566734

ಬ್ರಹ್ಮಾವರ: ಬಾರ್ಕೂರು ಕೂಡ್ಲಿ ದುರ್ಗಾಪರಮೇಶ್ವರಿ ಗದ್ದುಗೆ ಮಾರಿಯಮ್ಮ ದೇವಸ್ಥಾನದ ಕ್ರಾಸ್ ಬಳಿ ಮಂಗಳವಾರ ಕಾರು ಅಪಘಾತದಲ್ಲಿ ಓರ್ವರು ಮೃತಪಟ್ಟಿದ್ದಾರೆ. ಮೃತರನ್ನು ಕಾರಿನಲ್ಲಿದ್ದ ಯು.ಬಿ.ಪ್ರಭಾಕರ್ ರಾವ್ ( 80) ಎಂದು ಗುರುತಿಸಲಾಗಿದೆ.

ಮಂದಾರ್ತಿ-ಬಾರ್ಕೂರು ಮುಖ್ಯ ರಸ್ತೆಯಲ್ಲಿ ಬಾರ್ಕೂರು ಕಡೆಗೆ ಹೋಗುತ್ತಿದ್ದ ಕಾರು, ತಿರುವು ಹಾಗೂ ಇಳಿಜಾರು ರಸ್ತೆಯಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಾಡಿಗೆ ನುಗ್ಗಿ, ಅಲ್ಲಿದ್ದ ಟೆಲಿಫೋನ್ ಕಂಬಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾಗಿತ್ತು.

ಇದರಿಂದ ಕಾರು ಸಂಪೂರ್ಣ ಜಖಂಗೊಂಡಿದ್ದು, ಇದರ ಪರಿಣಾಮ ಕಾರಿನ ಹಿಂಭಾಗದ ಸೀಟಿನಲ್ಲಿ ಕುಳಿತಿದ್ದ ಪ್ರಭಾಕರ್ ರಾವ್ ಗಂಭೀರವಾಗಿ ಗಾಯಗೊಂಡು ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಇವರೊಂದಿಗೆ ಕುಳಿತಿದ್ದ ಇವರ ಪತ್ನಿ ಉಷಾ ಪಿ.ರಾವ್ ತೀವ್ರವಾಗಿ ಗಾಯ ಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!