ವಿಟ್ಲ: ಮದರಸ ಪಬ್ಲಿಕ್ ಪರೀಕ್ಷೆ: ಶಾಂತಿನಗರ ಮದ್ರಸಾ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತಮ ಸಾಧನೆ

ವಿಟ್ಲ: ಸುನ್ನಿ ಎಜುಕೇಶನಲ್ ಬೋರ್ಡ್ ನಡೆಸಿದ 2024-25ನೇ ಸಾಲಿನ ಮದರಸ ಪಬ್ಲಿಕ್ ಪರೀಕ್ಷೆಯಲ್ಲಿ ವಿಟ್ಲ ಮುಡ್ನೂರು ಗ್ರಾಮದ ಕಂಬಳಬೆಟ್ಟು ಶಾಂತಿನಗರ ಮದ್ರಸ 7ನೇ ತರಗತಿಯ ವಿದ್ಯಾರ್ಥಿಗಳಾದ ಅಬ್ದುಲ್ ಸಲೀಂ ಹಾಗು ಝುಹುರ ದಂಪತಿಗಳ ಮಕ್ಕಳಾದ ಫಾತಿಮತ್ ಶಿಝ 600 ರಲ್ಲಿ 582 ಫಾತಿಮತ್ ಸಲ್ವ 580 ಹಾಗೂ ಎಲಿಮಲೆ ಸೂಫಿ ಮೊಹಮ್ಮದ್ ಹಾಗೂ ಅನೀಸ ದಂಪತಿಗಳ ಪುತ್ರಿ ಝೈನಬ ಹೈಫ 581 ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿ ವಿಶಿಷ್ಟ ಸಾಧನೆ ಮಾಡಿದ್ದಾರೆ.
ಇವರ ಅಧ್ಯಾಪಕರಾದ ಮುಹಮ್ಮದ್ ಹಾರೀಸ್ ಮದನಿ ಪಾಟ್ರಕೋಡಿ ಇವರಿಗೆ ಅಭಿನಂದನೆಗಳನ್ನು ಸಲ್ಲಿಸಿದೆ ಎಂದು ಶಾಂತಿನಗರ ಮದ್ರಸ ಸಮಿತಿ ಪತ್ರಿಕಾ ಪ್ರಕಟಣೆಯನ್ನು ತಿಳಿಸಿದ್ದಾರೆ.