ಹೆಗ್ಗೆರೆಗೇಟ್ ಬಳಿ ಲಾರಿ- ಟಿಟಿ ವಾಹನದ ನಡುವೆ ಅಪಘಾತ: ಮೂವರು ಸಾವು
ಚಿತ್ರದುರ್ಗ: ಇಲ್ಲಿನ ಹೆಗ್ಗೆರೆಗೇಟ್ ಬಳಿ ಲಾರಿ- ಟಿಟಿ ವಾಹನದ ನಡುವೆ ಭೀಕರ ಅಪಘಾತ ನಡೆದು ಮೂರು ಮಂದಿ ದುರ್ಮರಣ ಹೊಂದಿದ ಘಟನೆ ಶನಿವಾರ ನಡೆದಿದೆ.
ಯುಗಾದಿ ಹಬ್ಬಕ್ಕೆ ಊರಿಗೆ ಬರುತ್ತಿದ್ದ ಕೂಲಿ ಕಾರ್ಮಿಕರು ಮಸಣಕ್ಕೆ ಸೇರಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗೇಟ್ ಬಳಿ ಈ ದುರಂತ ಘಟನೆ ನಡೆದಿದೆ.
ಮೃತರ ಗುರುತು ಇನ್ನೂ ಕೂಡಾ ಪತ್ತೆಯಾಗಿಲ್ಲ. ಮೃತರು ಚಳ್ಳಕೆರೆ ತಾಲೂಕಿನ ತಳಕು ಮೂಲದವರು ಎಂಬ ಮಾಹಿತಿ ಲಭ್ಯವಾಗಿದೆ.





