ಕಸದ ಲಾರಿ ಹರಿದು 10 ವರ್ಷದ ಬಾಲಕ ಮೃತ್ಯು

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಸದ ಲಾರಿಗೆ 10 ವರ್ಷದ ಬಾಲಕನೊಬ್ಬ ಬಲಿಯಾಗಿರುವ ಘಟನೆ ಬೆಂಗಳೂರಿನ ಥಣಿಸಂಧ್ರ ರೈಲ್ವೆ ಟ್ರ‍್ಯಾಕ್ ಬಳಿ ನಡೆದಿದೆ.
ಐಮಾನ್ (10) ಮೃತ ಬಾಲಕ. 12 ಸುಮಾರಿಗೆ ಸ್ಕೂಲ್ ಅಡ್ಮಿಷನ್ ವಿಚಾರಿಸಲು ಮನೆಯಿಂದ ಹೊರಟಿದ್ರು. ತನ್ನ ತಂದೆಯೊಂದಿಗೆ ಬೈಕ್‌ನಲ್ಲಿ ಬಾಲಕ ತೆರಳಿದ್ದ.
ಈ ವೇಳೆ ಕಸದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕೆಳಗೆ ಬಿದ್ದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಜೊತೆಯಲ್ಲಿದ್ದ ಬಾಲಕನ ತಂದೆಗೂ ಗಾಯಗಳಾಗಿದ್ದು, ಅಂಬೇಡ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.