ಕಬ್ಬಿನ ಜ್ಯೂಸ್ ಮಷಿನ್‌ಗೆ ಸಿಕ್ಕಿ ಹಾಕಿಕೊಂಡ ಮಹಿಳೆಯ ಜಡೆ: ವಿಡಿಯೋ ವೈರಲ್

ತೆಲಂಗಾಣ: ಕಬ್ಬಿನ ಹಾಲು ತಯಾರಿಸುತ್ತಿದ್ದ ಸಂದರ್ಭದಲ್ಲಿ ಮಹಿಳೆಯೊಬ್ಬರ ಜಡೆ ಕಬ್ಬಿನ ಜ್ಯೂಸ್ ಮಷಿನ್‌ಗೆ ಸಿಕ್ಕಿ ಹಾಕಿಕೊಂಡಿದೆ. ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತದಿಂದ ಮಹಿಳೆ ಪಾರಾಗಿದ್ದು, ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.
ಈ ಆಘಾತಕಾರಿ ಘಟನೆ ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ ಡೋರ್ನಕಲ್ ಪಟ್ಟಣದಲ್ಲಿ ನಡೆದಿದ್ದು, ಇಲ್ಲಿನ ಅಂಚೆ ಕಚೇರಿಯ ಬಳಿ ಕಬ್ಬಿನ ಜ್ಯೂಸ್ ಮಾರಿ ಜೀವನ ಸಾಗಿಸುತ್ತಿದ್ದ ಮಹಿಳೆಯೊಬ್ಬರ ಕೂದಲು ಕಬ್ಬಿನ ಜ್ಯೂಸ್ ಮಷಿನ್‌ಗೆ ಸಿಲುಕಿದಂತಹ ಘಟನೆ ನಡೆದಿದೆ. ಕಬ್ಬಿನ ಹಾಲು ತಯಾರಿಸುತ್ತಿದ್ದ ವೇಳೆ ಯಂತ್ರದ ಚಕ್ರಕ್ಕೆ ಮಹಿಳೆಯ ಜಡೆ ಸಿಕ್ಕಿ ಹಾಕಿಕೊಂಡಿದ್ದು, ತಕ್ಷಣ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವ ಮೂಲಕ ಅಲ್ಲಿದ್ದವರು ಮಹಿಳೆಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.