ಮಾರಕಾಸ್ತ್ರ ಹಿಡಿದು ‘ರೀಲ್ಸ್’ ಕಿರುತೆರೆಯ ಇಬ್ಬರು ನಟರಿಗೆ ಜಾಮೀನು

ಬೆಂಗಳೂರು: ಮಾರಕಾಸ್ತ್ರ ಹಿಡಿದು ‘ರೀಲ್ಸ್’ ಮಾಡಿದ್ದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕಿರುತೆರೆಯ ನಟರಾದ ವಿನಯ್‌ಗೌಡ ಹಾಗೂ ರಜತ್ ಕಿಶನ್ ಅವರಿಗೆ 24ನೇ ಎಸಿಜೆಎಂ ನ್ಯಾಯಾಲಯವು ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
‘ಬಿಗ್ ಬಾಸ್’ನ ಮಾಜಿ ಸ್ಪರ್ಧಿಗಳಾದ ವಿನಯ್ ಹಾಗೂ ರಜತ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಇಬ್ಬರಿಗೂ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದರು. ₹10 ಸಾವಿರ ಭದ್ರತಾ ಠೇವಣಿ ಇಡುವಂತೆ ನ್ಯಾಯಾಲಯವು ಷರತ್ತು ವಿಧಿಸಿದೆ.
“ಆರೋಪಿಗಳು ಸಾಕ್ಷ್ಯನಾಶ ಮಾಡಿದ್ದು, ಜಾಮೀನು ನೀಡಬಾರದು’ ಎಂದು ಪ್ರಾಸಿಕ್ಯೂಶನ್ ಪರವಾಗಿ ವಕೀಲರು ಕೋರಿದರು.
ವಿನಯ್ ಹಾಗೂ ರಜತ್ ಅವರು ತನಿಖೆಗೆ ಸಹಕಾರ ನೀಡಲಿದ್ದಾರೆ. ವಿನಯ್ ಅವರು ಭಾನುವಾರ ಸಿನಿಮಾವೊಂದರ ಚಿತ್ರೀಕರಣದಲ್ಲಿ ಪಾಲ್ಗೊಳ್ಳಬೇಕಿದೆ. ಅವರಿಗೆ ಕಣ್ಣಿನ ಸಮಸ್ಯೆಯೂ ಇದೆ. ಈ ಕಾರಣದಿಂದ ಜಾಮೀನು ಮಂಜೂರು ಮಾಡಬೇಕು ಎಂದು ಆರೋಪಿಗಳ ಪರ ವಕೀಲರು ಕೋರಿದರು.