ಕಾಲುವೆಗೆ ಸ್ನಾನಕ್ಕೆ ತೆರಳಿದ್ದ ಬಾಲಕರಲ್ಲಿ ಓರ್ವ ಮೃತ್ಯು, ಇಬ್ಬರ ರಕ್ಷಣೆ

ಬಳ್ಳಾರಿ: ಎಲ್‌ಎಲ್‌ಸಿ ಕಾಲುವೆಯಲ್ಲಿ ಕಾಲು ಜಾರಿಬಿದ್ದು ಓರ್ವ ಬಾಲಕ ಮೃತಪಟ್ಟಿದ್ದು, ಇಬ್ಬರು ಮಕ್ಕಳನ್ನ ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಶ್ರೀನಿವಾಸ್ ಕ್ಯಾಂಪ್ ಬಳಿ ನಡೆದಿದೆ.
ವಿಕ್ರಂ(14) ಮೃತ ಬಾಲಕ. ವಿಪರೀತ ಬಿಸಿಲಿನ ಪರಿಣಾಮ ವಿಕ್ರಂ, ಶಂಭುಲಿಂಗ ಹಾಗೂ ದೀಪು ಎಂಬ ಮೂವರು ಯುವಕರು ಸ್ನಾನಕ್ಕೆಂದು ಎಲ್‌ಎಲ್‌ಸಿ ಕಾಲುವೆಗೆ ತೆರಳಿದ್ದರು. ಕಾಲುವೆಗೆ ಇಳಿಯುವಾಗ ಮೂವರೂ ಬಾಲಕರು ಕಾಲು ಜಾರಿ ಬಿದ್ದಿದ್ದರು.
ಈ ವೇಳೆ ವಿಕ್ರಂ ನೀರಿನ ರಭಸಕ್ಕೆ ಸಿಲುಕಿ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಾನೆ. ಕಾಲುವೆಯಲ್ಲಿ ಸಿಲುಕಿಕೊಂಡಿದ್ದ ಇಬ್ಬರು ಬಾಲಕರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.