“ಸೌಗಾತ್-ಎ-ಮೋದಿ” ಹೆಸರಿನಲ್ಲಿ BJP ಅಭಿಯಾನ: ದೇಶದ 32 ಲಕ್ಷ ಬಡ ಮುಸ್ಲಿಮರಿಗೆ ವಿಶೇಷ ವಿಶೇಷ ಕಿಟ್

ಹೊಸದಿಲ್ಲಿ: ದೇಶದ ಬಡ ಮುಸ್ಲಿಮರು ರಮ್ಹಾನ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಸಹಾಯವಾಗಲೆಂದು ಬಿಜೆಪಿ ಹೊಸ ಅಭಿಯಾನವೊಂದನ್ನು ಆರಂಭಿಸಿದೆ.
“ಸೌಗಾತ್-ಎ-ಮೋದಿ’ ಹೆಸರಿನ ಈ ಅಭಿಯಾನವನ್ನು ಆರಂಭಿಸಿರುವ ಬಿಜೆಪಿಯ ಅಲ್ಪಸಂಖ್ಯಾಕ ಘಟಕವು ಇದರಡಿ ದೇಶದ 32 ಲಕ್ಷ ಬಡ ಮುಸ್ಲಿಮರಿಗೆ ವಿಶೇಷ ಕಿಟ್ ನೀಡುವ ಗುರಿ ಹಾಕಿ ಕೊಂಡಿದೆ.
ಪವಿತ್ರ ರಮ್ಹಾನ್ ಮಾಸದ ಕೊನೆಯ ದಿನ ಆಚರಿಸಲಾಗುವ ಈದ್ ಉಲ್ ಫಿತರ್ ಸಲುವಾಗಿ ಈ ಕಿಟ್ ನೀಡಲಾಗುತ್ತಿದ್ದು, ಇದು ಹಬ್ಬದ ಆಚರಣೆಗೆ ಬೇಕಿರುವ ಸಾಮಗ್ರಿಗಳನ್ನು ಹೊಂದಿರಲಿದೆ. ಶ್ಯಾವಿಗೆ, ಖರ್ಜೂರ, ಒಣ ಹಣ್ಣುಗಳು, ಸಕ್ಕರೆ ಸಹಿತ ಹಲವು ಆಹಾರ ಪದಾರ್ಥಗಳು, ಮಹಿಳೆಯರ ಕಿಟ್‌ನಲ್ಲಿ ಸಲ್ವಾರ್ ಸೂಟ್, ಪುರುಷರ ಕಿಟ್‌ನಲ್ಲಿ ಕುರ್ತಾ ಪೈಜಾಮ ಇರಲಿದೆ ಎಂದು ವರದಿಯಾಗಿದೆ.