ವಿಟ್ಲ: ಬೊಳಂತಿಮೊಗರು ಸರಕಾರಿ ಪ್ರೌಢಶಾಲೆಗೆ ಸ್ವಂತ ಖರ್ಚಿನಲ್ಲಿ ಬೋರ್ ವೆಲ್ ಕೊರೆಸಿದ ಶಿಕ್ಷಕ

ವಿಟ್ಲ: ಬೊಳಂತಿಮೊಗರು ಸರಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಿಗಾಗಿ “ವಿಶ್ವ ಜಲ ದಿನ”ದಂದು ಬೋರ್ ವೆಲ್ ಕೊರೆಸಲಾಯಿತು. ಸುಮಾರು 4.5 ಇಂಚಿನಷ್ಟು ನೀರು ದೊರೆತಿರುತ್ತಿದ್ದು, ಶಿಕ್ಷಕರು, ಮಕ್ಕಳು, ಶಾಲಾಭಿವೃದ್ಧಿ ಸಮಿತಿ ಮತ್ತು ಶಿಕ್ಷಕ- ರಕ್ಷಕ ಸಂಘದ ಮುಖದಲ್ಲಿ ಸಂತಸ ಮೂಡಿದೆ. ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದ ಶಿಕ್ಷಕರೊಬ್ಬರ ಪರಿಶ್ರಮ ಮತ್ತು ಸೇವಾ ಸ್ಫೂರ್ತಿಯ ಮೂಲಕ ಎಲ್ಲರ ಮನ ಗೆದ್ದಿದ್ದಾರೆ
ಹೌದು…ಬೊಳಂತಿಮೊಗರು ಸರಕಾರಿ ಪ್ರೌಢಶಾಲೆಯಲ್ಲಿ ಸತತ 17 ವರ್ಷ ಸೇವೆ ಸಲ್ಲಿಸಿದ ರಾಮಣ್ಣ ಗೌಡರು, ಇದೇ ವರ್ಷ ಜುಲೈ ತಿಂಗಳಲ್ಲಿ ನಿವೃತ್ತಿ ಹೊಂದಲಿದ್ದಾರೆ, ತಮ್ಮ ಸೇವಾರ್ಥವಾಗಿ ಶಾಲೆ ಮತ್ತು ಮಕ್ಕಳಿಗಾಗಿ ಬೋರ್ ವೆಲ್ ನ್ನು “ವಿಶ್ವ ಜಲ ದಿನ”ದಂದು ಕೊರೆಯಿಸಿದ್ದು,4.5 ಇಂಚಿನಷ್ಟು ನೀರು ದೊರೆತಿರುತ್ತದೆ.
ಇಂಥ ಅಪೂರ್ವ, ಅತ್ಯಮೂಲ್ಯ ಕೊಡುಗೆ ನೀಡಿದ ರಾಮಣ್ಣ ಅವರಿಗೆ ಶಾಲೆಯ ಶಿಕ್ಷಕರು, ಮಕ್ಕಳು, ಶಾಲಾಭಿವೃದ್ಧಿ ಸಮಿತಿ ಮತ್ತು ಶಿಕ್ಷಕ- ರಕ್ಷಕ ಸಂಘದ ವತಿಯಿಂದ ಹೃದಯ ಪೂರ್ವಕ ಧನ್ಯವಾದ ಅರ್ಪಿಸಿದ್ದಾರೆ.