ಬಂಟ್ವಾಳ: ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದ ಗುಡ್ಡದಲ್ಲಿ ಬೆಂಕಿ ಅವಘಡ: ಒಂದು ಸಾವಿರ ಪುನರ್ಪುಳಿ ಗಿಡಗಳು ಭಸ್ಮ

ಬಂಟ್ವಾಳ: ತಾಲೂಕಿನ ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದ ಗುಡ್ಡದಲ್ಲಿ ಬೆಂಕಿ ದುರಂತ ಸಂಭವಿಸಿದ್ದು, ಮೂರು ವರ್ಷಗಳ ಹಿಂದೆ ನೆಟ್ಟಿದ್ದ ಸುಮಾರು ಒಂದು ಸಾವಿರ ಪುನರ್ಪುಳಿ ಗಿಡಗಳು ಕರಟಿ ಹೋಗಿವೆ.
ಸ್ಥಳೀಯರು ನೀರು ಹಾಕಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಬಿಸಿಲಿನ ಧಗೆಗೆ ಬೆಂಕಿ ಗುಡ್ಡಕ್ಕೆ ಹರಡಿಕೊಂಡಿತು. ಬಳಿಕ ಬಂಟ್ವಾಳ ಅಗ್ನಿಶಾಮಕ ಸಿಬಂದಿ ಆಗಮಿಸಿ ಬೆಂಕಿಯನ್ನು ನಂದಿಸಿದರು. ಫಲಭರಿತ ಸುಮಾರು 50 ಗಿಡಗಳು ಬೆಂಕಿಯ ಕೆನ್ನಾಲಗೆಗೆ ಸಿಕ್ಕಿ ಸುಟ್ಟು ಹೋಗಿವೆ.
ಅದೃಷ್ಟವಶಾತ್ ಹತ್ತಿರದಲ್ಲಿರುವ ಮನೆಗಳು ಹಾಗೂ ಏರ್‌ಟೆಲ್ ಟವರ್‌ಗೆ ಹಾನಿಯಾಗಲಿಲ್ಲ.