ಈಜು ಕಲಿಯಲು ಪ್ಲಾಸ್ಟಿಕ್ ಡಬ್ಬಾ ಕಟ್ಟಿಕೊಂಡು ನೀರಿಗೆ ಇಳಿದಿದ್ದ ಬಾಲಕ ಮೃತ್ಯು

ಕಲಬುರಗಿ : ಕೃಷಿ ಹೊಂಡದಲ್ಲಿ ಬಿದ್ದು ಎಸೆಸೆಲ್ಸಿ ವಿದ್ಯಾರ್ಥಿಯೊರ್ವ ಮೃತಪಟ್ಟಿರುವ ಘಟನೆ ಅಫಜಲಪುರ ಪಟ್ಟಣದಲ್ಲಿ ಶನಿವಾರ ನಡೆದಿದೆ.
ಶ್ರೀಶೈಲ್ ನಿಲೆಗಾರ್ (16) ಕೃಷಿ ಹೊಂಡದಲ್ಲಿ ಬಿದ್ದು ಮೃತಪಟ್ಟಿರುವ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಈಜು ಕಲಿಯಲು ಪ್ಲಾಸ್ಟಿಕ್ ಡಬ್ಬಾ ಕಟ್ಟಿಕೊಂಡು ಕೃಷಿ ಹೊಂಡಕ್ಕೆ ಇಳಿದಿದ್ದ. ಪ್ಲಾಸ್ಟಿಕ್ ಡಬ್ಬಾಕ್ಕೆ ಕಟ್ಟಿರುವ ಹಗ್ಗ ಕಳಚಿ ಬಿದ್ದು ಹೊಂಡದಲ್ಲಿ ಮುಳುಗಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ಘಟನೆಯು ಅಫಜಲಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.