ಮದ್ದೂರಮ್ಮ ಜಾತ್ರೆಯಲ್ಲಿ ಮುರಿದು ಬಿದ್ದ ತೇರು: ಇಬ್ಬರು ಸಾವು, ಹಲವರಿಗೆ ಗಾಯ

ಆನೇಕಲ್: ತಾಲೂಕಿನ ಪ್ರತಿಷ್ಠಿತ ಹುಸ್ಕೂರು ಮದ್ದೂರಮ್ಮ ಜಾತ್ರೆಯ ವಿಶೇಷ ಆಕರ್ಷಣೆಯ ಎರೆಡು ಕುರುಜುಗಳು ಉರುಳಿ ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿದರೆ ಮತ್ತಿಬ್ಬರು ಗಂಭೀರ ಗಾಯಗಳಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಮಿಳುನಾಡಿನ ಹೊಸೂರು ಮೂಲದ 26 ವರ್ಷದ ರೋಹಿತ್ ಹಾಗು ಬೆಂಗಳೂರು ಕೆಂಗೇರಿ ಮೂಲದ 14 ವರ್ಷದ ಜ್ಯೋತಿ ಸಾವನ್ನಪ್ಪಿದವರು.
ಉಳಿದಂತೆ ಲಕ್ಕಸಂದ್ರದ ರಾಕೇಶ್ ಜೊತೆಗೆ ಮತ್ತೋವ್ರ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ದೊಡ್ಡನಾಗಮಂಗಲದ ಕುರುಜು ಚಿಕ್ಕನಾಗಮಂಗಲದ ಬಳಿ ಮರಗಳ ಮೇಲೆ ಉರುಳಿದರೆ, ದೇವಾಲಯದ ಬಳಿಯ ರಾಯಸಂದ್ರ ಕುರುಜು ಜನರ ಮೇಲೆ ಉರುಳಿದೆ. ಕುರುಜಿನ ಕೆಳಗೆ ಭಕ್ತರು ಸಿಲುಕಿ ಆಟೋ ಚಾಲಕ ರೋಹಿತ್ ಮತ್ತು ಹುಡುಗಿ ಜ್ಯೋತಿ ಸಾವನ್ನಪ್ಪಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.