ವಿಟ್ಲ: ಬಸ್ ನಿಲ್ದಾಣದ ಹಿಂಬದಿ ಪಾಲು ಬಿದ್ದ ಕೆರೆಯಲ್ಲಿ ಶವ ಪತ್ತೆ ಪ್ರಕರಣ: ಮೃತನ ಗುರುತು ಪತ್ತೆ

ವಿಟ್ಲ: ಅಪರಿಚಿತ ಶವವೊಂದು ವಿಟ್ಲ ಪ್ರೈವೇಟ್ ಬಸ್ ನಿಲ್ದಾಣದ ಹತ್ತಿರದ ಮನೆಯೊಂದರ ಕೆರೆಯಲ್ಲಿ ಪತ್ತೆಯಾದ ಘಟನೆಗೆ ಸಂಬಂಧಿಸಿ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿದೆ.
ಬೊಬ್ಬೆಕೇರಿ ನಿವಾಸಿ ಹುಲಿ ವೇಷಧಾರಿ ಸುಂದರ ಮೃತಪಟ್ಟ ವ್ಯಕ್ತಿ. ಈತ ಕಳೆದ ಆರು ತಿಂಗಳ ಹಿಂದೆ ಮನೆಯಿಂದ ಹೋದಾತ ನಾಪತ್ತೆಯಾಗಿದ್ದ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ವಿಟ್ಲ ದ ಪಾಲುಬಿದ್ದ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದ್ದು, ಸುಂದರ ಅವರದ್ದು ಎಂಬುದು ಬೆಳಕಿಗೆ ಬಂದಿದೆ.