Tv9 ಕ್ಯಾಮರಾಮೆನ್ ರವಿ ಗಿರಣಿ ಆತ್ಮಹತ್ಯೆ

ಗದಗ: ಟಿವಿ 9 ಕನ್ನಡ ನ್ಯೂಸ್ ವಾಹಿನಿಯಲ್ಲಿ ಗದಗದಲ್ಲಿ ಕ್ಯಾಮರಾಮೆನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರವಿ ಗಿರಣಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಟಿವಿ9 ಪ್ರಾರಂಭವಾದಾಗಿನಿಂದ ಕ್ಯಾಮೆರಾಮೆನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರವಿ ಗಿರಣಿ ದಾವಣಗೆರೆ , ಮಂಗಳೂರು ಬಳಿಕ ಪ್ರಸ್ತುತ ಗದಗದಲ್ಲಿ ಕೆಲಸ ಮಾಡಿದ್ದರು. ಮಂಗಳೂರಿನಲ್ಲಿ ಅನೇಕ ವರ್ಷ ಕೆಲಸ ಮಾಡಿರುವ ರವಿ ಗಿರಣಿ ಜಿಲ್ಲೆಯಲ್ಲಿ ತಮ್ಮ ಸೌಮ್ಯ ಸ್ವಭಾವದಿಂದ ಜಿಲ್ಲೆಯಲ್ಲಿ ಅನೇಕ ಸ್ನೇಹಿತರನ್ನು ಹೊಂದಿದ್ದಾರೆ.
ಶುಕ್ರವಾರ ಸಂಜೆ ಕರ್ತವ್ಯ ಮುಗಿಸಿ ಮನೆಗೆ ಹೋಗಿದ್ದ ಅವರು ಪತ್ನಿಗೆ ವಿಡಿಯೋ ಕರೆ ಮಾಡಿ ಮಾತನಾಡಿದ್ದಾರೆ. ಈ ವೇಳೆ ಆತ್ಮಹತ್ಯೆ ಮಾಡಿಕೊಳ್ಳುವ ವಿಚಾರ ತಿಳಿಸಿದ್ದು ಕಾರಣ ಏನು ಎಂದು ತಿಳಿಸಿರಲಿಲ್ಲ. ರವಿ ಅವರ ಪತ್ನಿ ಗಂಗಾವತಿಯಲ್ಲಿ ಶಿಶು ಕಲ್ಯಾಣ ಇಲಾಖೆಯಲ್ಲಿ ಅಧಿಕಾರಿಯಾಗಿದ್ದು, ತಕ್ಷಣ ಮನೆ ಸಮೀಪದವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.