ಮಂಗಳೂರು: 2 ರಿಕ್ಷಾ, 2 ಕಾರುಗಳಿಗೆ ಢಿಕ್ಕಿ ಹೊಡೆದ ಮತ್ತೊಂದು ಕಾರು

ಮಂಗಳೂರು: ನಗರದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ವೃತ್ತದ ಬಳಿ ಗುರುವಾರ ರಾತ್ರಿ ಸರಣಿ ಅಪಘಾತ ಸಂಭವಿಸಿದೆ. ವಾಹನದಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ರಾಜಶೇಖರ್ ಎಂಬಾತ ಅತಿಯಾದ ವೇಗದಿಂದ ಕಾರು ಚಲಾಯಿಸಿ ಎರಡು ರಿಕ್ಷಾ ಮತ್ತು ಎರಡು ಕಾರುಗಳಿಗೆ ಢಿಕ್ಕಿ ಹೊಡಿದಿದ್ದು, ಎಲ್ಲ ವಾಹನಗಳು ಜಖಂಗೊಂಡಿವೆ.
ಘಟನೆ ಬಳಿಕ ರಾಜಶೇಖರ್ ಸ್ಥಳದಿಂದ ಪರಾರಿಯಾಗಿದ್ದಾನೆ. ಕಾರಿನಲ್ಲಿ ಮುದ್ರಣ ಸಂಸ್ಥೆಯೊಂದರ ನಕಲಿ ಐಡಿಕಾರ್ಡ್ ಕಾರ್ಡ್ ಪತ್ತೆಯಾಗಿದ್ದು, ಪೊಲೀಸರು ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.