ನಾಲೆಯಲ್ಲಿ ಯುವತಿಯ ಮೃತದೇಹ ಪತ್ತೆ: ಟ್ಯಾಕ್ಸಿ ಚಾಲಕನ ಬಂಧನ
ನವದೆಹಲಿ: ಮಾರ್ಚ್ 12 ರಂದು ಸೀಮಾಪುರಿ ಪ್ರದೇಶದಿಂದ ನಾಪತ್ತೆಯಾಗಿದ್ದ ಯುವತಿಯ ಮೃತದೇಹ ರಾಜಧಾನಿ ದೆಹಲಿಯ ಚಾವ್ಹಾ ಪ್ರದೇಶದ ನಾಲೆಯಲ್ಲಿ ಪತ್ತೆಯಾಗಿದ್ದು ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಟ್ಯಾಕ್ಸಿ ಚಾಲಕನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಸೀಮಾಪುರಿ ನಿವಾಸಿಯಾಗಿರುವ ಕೋಮಲ್ ಮೃತ ದುರ್ದೈವಿಯಾಗಿದ್ದಾಳೆ. ಮಾರ್ಚ್ 12 ರಂದು ಕೋಮಲ್ ನಾಪತ್ತೆಯಾಗಿದ್ದು ಯುವತಿಯ ಪೋಷಕರು ಸೀನ್ಸುರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿರುವ ಕುರಿತು ದೂರು ನೀಡಿದ್ದು ಅದರಂತೆ ಪೊಲೀಸರು ತಂಡ ರಚಿಸಿ ಕೋಮಲ್ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದರು.
ನಾಲೆಯಲ್ಲಿ ಪತ್ತೆಯಾಯ್ತು ಮೃತದೇಹ: ಮಾರ್ಚ್ 12 ರಂದು ನಾಪತ್ತೆಯಾಗಿದ್ದ ಕೋಮಲ್ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದರೂ ಎಲ್ಲೂ ಪತ್ತೆಯಾಗಿಲ್ಲ ಆದರೆ ಮಾರ್ಚ್ 17 ರಂದು ಛಾವ್ಹಾ ನಾಲೆಯಲ್ಲಿ ಯುವತಿಯೊಬ್ಬಳ ಮೃತದೇಹ ಪತ್ತೆಯಾಗಿತ್ತು




