ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಆಕ್ಷೇಪಾರ್ಹ ಸಂದೇಶ ಹರಿಯಬಿಟ್ಟ ವ್ಯಕ್ತಿಯ ಮೇಲೆ ಪ್ರಕರಣ ದಾಖಲು

ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಆಕ್ಷೇಪಾರ್ಹ ವಾಯ್ಸ ಸಂದೇಶವನ್ನು ವಾಟ್ಸಪ್‌ನಲ್ಲಿ ಹಾಕಿ ಧರ್ಮಗಳ ಮಧ್ಯೆ ದ್ವೇಷ, ವೈಮನಸ್ಸು ಮೂಡುವಂತೆ ಮಾಡಿದ ಆರೋಪದಲ್ಲಿ ಹಕೀಂ ಕೂರ್ನಡ್ಕ ಎಂಬಾತನ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಲಾಕ್ ಕಾಂಗ್ರೆಸ್ ಸಂಘಟನ ಕಾರ್ಯದರ್ಶಿ, ನಗರಸಭೆಯ ಕಾಂಗ್ರೆಸ್ ಸದಸ್ಯ ಪರ್ಲಡ್ಕ ನಿವಾಸಿ ಬಶೀರ್ ದೂರು ನೀಡಿದವರು.
ಕೆಮ್ಮಿಂಜೆ ಗ್ರಾಮದ ಕೂರ್ನಡ್ಕ ನಿವಾಸಿ ಹಕೀಂ ಹಾಕಿರುವ ವಾಯ್ಸ ಸಂದೇಶದಲ್ಲಿ ಅಶೋಕ್ ರೈ ಒಂದು ಸಮುದಾಯವನ್ನು ಮೂಲೆಗುಂಪು ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಇದು ಸಮುದಾಯಗಳ ನಡುವೆ ದ್ವೇಷ ಹರಡುವ ಅಪಾಯವಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.’