ಕಾರ್ಕಳ: ತಲೆ ಮರೆಸಿಕೊಂಡ ಆರೋಪಿಯನ್ನು 34 ವರ್ಷ ಬಳಿಕ ಬಂಧನ
ಕಾರ್ಕಳ: ಕಾರ್ಕಳ ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡ ಆರೋಪಿಯೊಬ್ಬನನ್ನು 34 ವರ್ಷ ಬಳಿಕ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಘಟನೆ ನಡೆದಿದೆ.
ತೆಂಕ ಎಡಪದವಿನ ಲಿಯೋ ರೋಚ್ (64) ಬಂಧಿತ. ಈತನ ವಿರುದ್ಧ 2004ರಲ್ಲಿ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 34 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದು ಈತನ ಮೇಲೆ ನ್ಯಾಯಾಲಯವು LPC ವಾರೆಂಟು ಹೊರಡಿಸಿತ್ತು.




