ವಿಟ್ಲ; ವಿ ಫೌಂಡೇಶನ್ ವತಿಯಿಂದ ಬೃಹತ್ ಸೌಹಾರ್ದ ಇಫ್ತಾರ್ ಕೂಟ: ಎಲ್ಲೆಡೆಯಿಂದ ಹರಿದು ಬಂದ ಜನಸಾಗರ

ವಿಟ್ಲ: ವಿ ಫೌಂಡೇಶನ್ ವಿಟ್ಲ ವತಿಯಿಂದ ಸೌರ್ಹಾರ್ದ ಇಫ್ತಾರ್ ಕೂಟ ವಿಟ್ಲದ ವಿ.ಎಚ್ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.
ಈ ಬೃಹತ್ ಇಫ್ತಾರ್ ಕೂಟದಲ್ಲಿ 2000 ಸಾವಿರ ಮಂದಿಗೆ ವ್ಯವಸ್ಥೆ ಮಾಡಲಾಗಿತ್ತು. ವಿಟ್ಲ ಸುತ್ತಮುತ್ತಲಿನ ಪ್ರದೇಶದಿಂದ ಜನಸಾಗರವೇ ಹರಿದು ಬಂದಿತ್ತು. ವಿಟ್ಲದ ವಿಎಚ್ ಕಾಂಪ್ಲೆಕ್ಸ್, ಸ್ಮಾರ್ಟ್ ಸಿಟಿ, ಇಫ್ತಾರ್ ಗೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಜನರ ಸಂಖ್ಯೆ ಹೆಚ್ಚಾಗಿದ್ದರಿಂದ ಮತ್ತೆ ಬ್ರೈಟ್ ಆಡಿಟೋರಿಯಂ ನಲ್ಲಿ ಇಫ್ತಾರ್ ಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಯಿತು. ವಿ ಫೌಂಡೇಶನ್ ನ ನೂರಾರು ಕಾರ್ಯಕರ್ತರು ಈ ಬೃಹತ್ ಇಫ್ತಾರ್ ಗೆ ಹಗಲು ರಾತ್ರಿ ಕೆಲಸ ಮಾಡಿದ್ದರು.
ದಾವೂದ್ ಹನೀಫಿ, ವಿಟ್ಲ ಟೌನ್ ಮಸೀದಿ ಖತೀಬ್ ಅಬ್ಬಾಸ್ ಮದನಿ,ಎಂ ಎಸ್ ಮೊಹಮ್ಮದ್,
ವಿಟ್ಲ ವಾಣಿಜ್ಯ ಸಂಘದ ಅಧ್ಯಕ್ಷ ಬಾಬು ಕೆ.ವಿ, ನ್ಯಾಯವಾದಿ ಪದ್ಮನಾಭ ಪೂಜಾರಿ, ರಮಾನಾಥ ವಿಟ್ಲ, ವಿ.ಎಚ್ ಅಶ್ರಫ್, ವಿಟ್ಲ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಅಶ್ರಪ್ ಮಹಮ್ಮದ್ ಪೊನ್ನೋಟ್ಟು, ಅಬ್ದುಲ್ಲ ಆರ್ ಕೆ, ಝುಬೈರ್ ಡ್ರೀಮ್, ಅನ್ಸಾರ್ ಬೆಳ್ಳಾರೆ , ಖಲಂದರ್ ಪರ್ತಿಪ್ಪಾಡಿ, ಶಾಕೀರ್ ಅಳಕೆಮಜಲು, ಅಬೂಬಕ್ಕರ್ ಅನಿಲಕಟ್ಟೆ,ರಿಯಾಝ್ ಕಡಂಬು, ಅಶ್ರಪ್ ವಿಕೆಎಂ, ಶರೀಫ್ ಪೊನ್ನೋಟ್ಟು, ಇಸ್ಮಾಯಿಲ್ ಎನ್ 3, ವಿ ಎಸ್ ಇಬ್ರಾಹಿಂ ಒಕ್ಕೆತ್ತೂರು, ಅಝೀಜ್ ಕಡಂಬು, ವಿ ಫೌಂಡೇಶನ್ ಅಧ್ಯಕ್ಷ ತೌಸೀಫ್ ಎಂಜಿ, ಸಮೀರ್ ಪಳಿಕೆ, ಹನೀಫ್ ಟಿ.ಎಚ್ ಎಂ ಎ, ಶರೀಪ್ ಪೊನ್ನೋಟ್ಟು, ಮೊದಲಾದವರು ಉಪಸ್ಥಿತರಿದ್ದರು.