ವಿಟ್ಲ: ಪೊನ್ನೋಟ್ಟು ಫ್ಯಾಮಿಲಿ ವತಿಯಿಂದ ಕೇಂದ್ರ ಜುಮಾ ಮಸೀದಿಗೆ ರಂಝಾನ್ ಕಿಟ್ ಹಸ್ತಾಂತರ

ವಿಟ್ಲ: ಪೊನ್ನೋಟ್ಟು ಫ್ಯಾಮಿಲಿ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ವಿತರಿಸಲು ರಂಝಾನ್ ಕಿಟ್ ಅನ್ನು ವಿಟ್ಲ ಕೇಂದ್ರ ಜುಮಾ ಮಸೀದಿಗೆ ಹಸ್ತಾಂತರ ಮಾಡಲಾಯಿತು.
ಪೊನ್ನೋಟ್ಟು ಫ್ಯಾಮಿಲಿ ಕುಟುಂಬದ ಹಿರಿಯರಾದ ವಿ.ಎಂ ಮಹಮ್ಮದ್ ಅವರು ಕೇಂದ್ರ ಜುಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಅಶ್ರಪ್ ಮಹಮ್ಮದ್ ಪೊನ್ನೋಟ್ಟು ಅವರಿಗೆ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭ ವಿಟ್ಲ ಕೇಂದ್ರ ಜುಮಾ ಮಸೀದಿ ಮುದರ್ರಿಸ್ ದಾವೂದ್ ಹನೀಫಿ, ಶೇಖ್ ಮಹಮ್ಮದ್ ಇರ್ಫಾನಿ, ಹಕೀಮ್ ಹರ್ಷದಿ, ಝುಬೈರ್ ಮಾಸ್ತರ್, ಹೊರೈಝನ್ ಸ್ಕೂಲ್ ಅಧ್ಯಕ್ಷ ಅಝೀಜ್ ಸನ, ಹಮೀದ್ ಎ ಎಸ್ ಪೊನ್ನೋಟ್ಟು, ಮುಸ್ತಫಾ ಖಲೀಲ್, ಅಬೂಬಕ್ಕರ್ ಪೊನ್ನೋಟ್ಟು, ಅಬ್ದುಲ್ ಖಾದರ್ ಪೊನ್ನೋಟ್ಟು, ಜಾಫರ್ ಖಾನ್ ಮೊದಲಾದವರು ಉಪಸ್ಥಿತರಿದ್ದರು.