ಮಂಗಳೂರು: 5ನೇ ಮಹಡಿಯಿಂದು ಬಿದ್ದು 13 ವರ್ಷದ ಬಾಲಕ ಸಾವು

ಮಂಗಳೂರು: ಐದನೇ ಮಹಡಿಯಿಂದು ಬಿದ್ದು 13 ವರ್ಷದ ಬಾಲಕನೋರ್ವ ಸಾವನ್ನಪ್ಪಿದ ಘಟನೆ ಮಂಗಳೂರಿನ ಮೇರಿಹಿಲ್‌ನ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.
6ನೇ ತರಗತಿ ಓದುತ್ತಿದ್ದ ಸಮರ್ಜಿತ್(13) ಮೃತ ಬಾಲಕ. 4 2 2 3 5.30 80 5.50 8 ನಡುವೆ ನಡೆದಿದ್ದು, ಬಾಲಕನು ಮುಂಜಾನೆ ಯಾವೂದೋ ಕಾರಣಕ್ಕೆ ಅಪಾರ್ಟಮೆಂಟ್‌ನ 5 ನೇ ಮಹಡಿಗೆ ಹೋಗಿದ್ದಾನೆ. ಅಲ್ಲಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಮಹಡಿಯಿಂದ ಕೆಳಗೆ ಬಿದ್ದ ಪರಿಣಾಮ ತಲೆ ಹಾಗೂ ಬೆನ್ನಿಗೆ ಗಂಭೀರ ಗಾಯವಾಗಿದೆ. ತಕ್ಷಣ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಕೊನೆಯುಸಿರೆಳೆದಿದ್ದಾನೆ. ಬಾಲಕನು ತನ್ನ ಪುಸ್ತಕದಲ್ಲಿ ಪಬ್‌ಜಿ ಆಟದ ಬಗ್ಗೆ ಬರೆದಿದ್ದು, ಈ ಸಾವಿನ ಕಾರಣವಾಗಿರಬಹುದೆಂದು ಅನುಮಾನ ವ್ಯಕ್ತವಾಗಿದೆ.