ಶಾಲೆಯಲ್ಲಿ ಮಕ್ಕಳು ಓದಿನಲ್ಲಿ ಹಿಂದೆ: ತನ್ನ ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಂದೆ
ಆಂಧ್ರಪ್ರದೇಶ: ಶಾಲೆಯಲ್ಲಿ ಮಕ್ಕಳು ಓದಿನಲ್ಲಿ ಹಿಂದಿ ಇದ್ದರಿಂದ ಬೇಸರಗೊಂಡು ತಂದೆಯು ತನ್ನ ಇಬ್ಬರು ಮಕ್ಕಳನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಗೋದಾವರಿ ಜಿಲ್ಲೆಯ ತಡೆಪಲ್ಲಿಗುಡೇನಿಯಲ್ಲಿ ನಡೆದಿದೆ.
ತಂದೆ ಚಂದ್ರಕಿಶೋರ್ ಹಾಗೂ ಮಕ್ಕಳಾದ ಜೋಶಿಲ್ ಹಾಗೂ ನಿಖಿಲ್ ಸಾವಿಗೀಡಾದವರು. ಚಂದ್ರಕಿಶೋರ್ ಸ್ಥಳೀಯ ಒಎನ್‌ಜಿಸಿ ಕಚೇರಿಯಲ್ಲಿ ಸಹಾಯಕ ಲೆಕ್ಕಪತ್ರಗಾರರಾಗಿ ಕೆಲಸ ಮಾಡುತ್ತಿದ್ದರು.
ತನ್ನ ಒಬ್ಬರು ಮಕ್ಕಳು ಶಾಲೆಯಲ್ಲಿ ಓದಿನಲ್ಲಿ ಹಿಂದೆ ಇರುವುದೇ ಈತನಿಗೆ ದೊಡ್ಡ ಚಿಂತೆಯಾಗಿತ್ತು. ಹಾಗಾಗಿ ಒಂದು ದಿನ ಪತ್ನಿ ಮತ್ತು ಮಕ್ಕಳನ್ನು ತನ್ನ ಕಚೇರಿಗೆ ಕರೆದು ಬಳಿಕ ಪತ್ನಿಯನ್ನು ಕಛೇರಿಯಲ್ಲೇ ಇರುವಂತೆ ಹೇಳಿ ಇಬ್ಬರು ಮಕ್ಕಳನ್ನು ಶಾಲೆಯ ಸಮವಸ್ತ್ರದ ಅಳತೆಯನ್ನು ತೆಗೆಯಲು ಟೈಲರ್ ಬಳಿ ಕರೆದೊಯ್ಯುತ್ತಿರುವುದಾಗಿ ಹೇಳಿ ಹೋಗಿದ್ದಾನೆ.





