ಆಟವಾಡುತ್ತ ಬಾಟಲಿಯ ಮುಚ್ಚಳ ನುಂಗಿ 9 ತಿಂಗಳ ಮಗು ಮೃತ್ಯು

ತೆಲಂಗಾಣ: ತೆಲಂಗಾಣದಲ್ಲೊಂದು ಒಂಬತ್ತು ತಿಂಗಳ ಮಗು ಆಟವಾಡುತ್ತ ಬಾಟಲಿ ಮುಚ್ಚಳ ನುಂಗಿ ಮೃತಪಟ್ಟಿರುವ ಘಟನೆ ನಡೆದಿದೆ.
ತೆಲಂಗಾಣದ ಆಸಿಫಾಬಾದ್ ಜಿಲ್ಲೆಯಲ್ಲಿ ಎಆರ್ ಕಾನ್ ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಸುರೇಂದರ್ ಅವರ ಕುಟುಂಬ ಮಂಚಿರ್ಯಾಲ ಜಿಲ್ಲೆಯ ಲಕ್ಷೆಟ್ಟಿಪೇಟೆಯ ಕೊಮ್ಮುಗುಡೆಂನಲ್ಲಿರುವ ಸಂಬಂಧಿಕರ ಮನೆಯಲ್ಲಿ ನಡೆದ ಸಮಾರಂಭವೊಂದಕ್ಕೆ ಪತ್ನಿ, ಒಂಬತ್ತು ತಿಂಗಳ ಮಗು ರುದ್ರ ಅಯಾನ್ ಜೊತೆ ತೆರಳಿದ್ದಾರೆ ಈ ವೇಳೆ ಸಮಾರಂಭದಲ್ಲಿ ಸುರೇಂದರ್ ಅವರ ಸ್ನೇಹಿತರೂ ಬಂದಿದ್ದರು ಹಾಗೆಯೇ ಅವರ ಜೊತೆ ಮಾತನಾಡುತ್ತಿರುವ ವೇಳೆ ಸುರೇಂದರ್ ಅವರ ಕೈಯಲ್ಲಿದ್ದ ಮಗು ಅಯಾನ್ ಅಲ್ಲೇ ಪಕ್ಕದಲ್ಲಿ ಕುಳಿತು ಆಟವಾಡುತ್ತಿತ್ತು.