March 16, 2025

ನ್ಯೂಜಿಲೆಂಡ್‌ ವಿರುದ್ಧ ಭಾರತಕ್ಕೆ 44 ರನ್‌ಗಳ ಭರ್ಜರಿ ಜಯ: ಆಸೀಸ್‌ ಜೊತೆ ಸೆಮಿ ಫೈನಲ್ ನಲ್ಲಿ ಕಾದಾಟ

0

ದುಬೈ: ವರುಣ್‌ ಚಕ್ರವರ್ತಿ ಅವರ ಬೌಲಿಂಗ್‌ನಿಂದ ನ್ಯೂಜಿಲೆಂಡ್‌ ವಿರುದ್ಧ ಭಾರತ 44 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಅಜೇಯ ಜಯದೊಂದಿಗೆ ಸೆಮಿ ಫೈನಲ್‌ ಪ್ರವೇಶಿದ ಭಾರತ ಆಸ್ಟ್ರೇಲಿಯಾವನ್ನು ಎದುರಿಸಲಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 249 ರನ್‌ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್‌ 45.3 ಓವರ್‌ಗಳಲ್ಲಿ 205 ರನ್‌ಗಳಿಗೆ ಆಲೌಟ್‌ ಆಯ್ತು.

ದುಬೈ ಪಿಚ್‌ ಸ್ಪಿನ್ನರ್‌ಗಳಿಗೆ ನೆರವಾಗಲಿದೆ ಎನ್ನುವದನ್ನು ಮೊದಲೇ ತಿಳಿದಿದಿದ್ದ ಭಾರತ ಕಳೆದ ಎರಡೂ ಪಂದ್ಯಗಳಲ್ಲಿ ಮೂವರು ಸ್ಪಿನ್ನರ್‌ಗಳನ್ನು ಅಳವಡಿಸಿತ್ತು. ಆದರೆ ಈ ಪಂದ್ಯಕ್ಕೆ ಕುಲದೀಪ್‌, ಅಕ್ಷರ್‌, ರವೀಂದ್ರ ಜಡೇಜಾ ಜೊತೆ ವರುಣ್‌ ಚಕ್ರವರ್ತಿ ಅವರನ್ನು ಇಳಿಸಿತ್ತು.

 

 

ಇಂದಿನ ಪಂದ್ಯ ಗೆಲ್ಲುವುದರೊಂದಿಗೆ ಭಾರತ ಮಂಗಳವಾರ ಆಸ್ಟ್ರೇಲಿಯಾವನ್ನು ಎದುರಿಸಲಿದ್ದರೆ ಸೋತ ನ್ಯೂಜಿಲೆಂಡ್‌ ಬುಧವಾರ ಲಾಹೋರ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.

Leave a Reply

Your email address will not be published. Required fields are marked *

error: Content is protected !!