March 20, 2025

WPL-2025: ಡೆಲ್ಲಿ ಕ್ಯಾಪಿಟಲ್ಸ್‌ 9 ವಿಕೆಟ್‌ಗಳ ಜಯದೊಂದಿಗೆ ಪ್ಲೇ ಆಫ್‌ಗೆ ಲಗ್ಗೆ: ಬೆಂಗಳೂರಿನಲ್ಲೇ RCBಗೆ ಸತತ 4ನೇ ಸೋಲು

0

ಬೆಂಗಳೂರು: ಬೆಂಗಳೂರಲ್ಲಿ ಆರ್‌ಸಿಬಿಗೆ ಸತತ 4ನೇ ಸೋಲಿನ ಅನುಭವವಾಗಿದೆ. ಶೆಫಾಲಿ ವರ್ಮಾ, ಜೆಸ್‌ 132 ರನ್‌ಗಳ ಜೊತೆಯಾಟದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ 9 ವಿಕೆಟ್‌ಗಳ ಜಯದೊಂದಿಗೆ ಪ್ಲೇ ಆಫ್‌ಗೆ ಲಗ್ಗೆ ಇಟ್ಟಿದೆ.

ಇಂದು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ನಡುವಿನ ಪಂದ್ಯದಲ್ಲಿ ಟಾಸ್‌ ಸೋತು ಮೊದಲ ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 147 ರನ್‌ ಗಳಿಸಿ, ಡೆಲ್ಲಿಗೆ 148 ರನ್‌ ಗಳ ಗುರಿಯನ್ನು ನೀಡಿತ್ತು.

ಗೆಲುವಿನ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡ 15.3 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 151 ರನ್‌ ಗಳಿಸುವ ಮೂಲಕ ಗೆಲುವು ತನ್ನದಾಗಿಸಿಕೊಂಡಿದೆ.
ಆರಂಭಿಕ ಆಟಗಾರ್ತಿಯಾಗಿ ಬಂದ ಮೆಗ್‌ ಲ್ಯಾನಿಂಗ್‌ 12 ಎಸೆತಗಳಲ್ಲಿ 2 ರನ್‌ಗೆ ಔಟಾದರು. ಎರಡನೇ ಕ್ರಮಾಂಕದಲ್ಲಿ ಬಂದ ಜೆಸ್‌ ಜೊನಾಸ್ಸೆನ್‌ ಹಾಗೂ ಶೆಫಾಲಿ ವರ್ಮಾ ಜೊತೆಗೂಡಿ 132 ರನ್‌ ನೀಡುವ ಮೂಲಕ ಗೆಲುವಿಗೆ ನೆರವಾದರು.

 

 

ಜೆಸ್‌ ಜೊನಾಸ್ಸೆನ್‌ 38 ಎಸೆಗಳಲ್ಲಿ 9 ಬೌಂಡರಿ, 1 ಸಿಕ್ಸ್‌ ಬಾರಿಸಿ 61 ರನ್‌ ಹಾಗೂ ಶೆಫಾಲಿ ವರ್ಮಾ 43 ಎಸೆತಗಳಲ್ಲಿ 8 ಬೌಂಡರಿ, 4 ಸಿಕ್ಸ್‌ ಬಾರಿಸುವ ಮೂಲಕ 80 ರನ್‌ ಗಳಿಸಿದರು.

Leave a Reply

Your email address will not be published. Required fields are marked *

error: Content is protected !!