ಕಾಂಗ್ರೆಸ್ ಶಾಸಕನ ಪುತ್ರಿ ಕೃತಿಕಾ ಮೃತ್ಯು
ಬೆಂಗಳೂರು: ಕಾಂಗ್ರೆಸ್ ಶಾಸಕ ರಾಜು ಕಾಗೆ ಪುತ್ರಿ ಕೃತಿಕಾ ಕಾಗೆ ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ನಾಳೆ ರಾಜು ಕಾಗೆ ಅವರ ಸ್ವಗ್ರಾಮ ಉಗಾರದಲ್ಲಿ ಕೃತಿಕಾ ಕಾಗೆ ಅಂತ್ಯಕ್ರಿಯೆ ನಡೆಯಲಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಕೃತಿಕಾ ಕಾಗೆ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರು.





